ಜಲಪ್ರಳಯದಲ್ಲಿ ನಲುಗಿದೆ ಕೇರಳ: ವಿವಿಧ ರಾಜ್ಯಗಳಿಂದ ಪರಿಹಾರ ಸಹಕಾರ

7

ಜಲಪ್ರಳಯದಲ್ಲಿ ನಲುಗಿದೆ ಕೇರಳ: ವಿವಿಧ ರಾಜ್ಯಗಳಿಂದ ಪರಿಹಾರ ಸಹಕಾರ

Published:
Updated:
Deccan Herald

ಬೆಂಗಳೂರು: ಪ್ರವಾಹ ಪೀಡಿತ ಕೇರಳಕ್ಕೆ ದೇಶದ ಹಲವು ರಾಜ್ಯಗಳು ವಿವಿಧ ರೀತಿಯಲ್ಲಿ ಸಹಾಯಹಸ್ತ ಚಾಚಿವೆ, ಇನ್ನೂ ಕೆಲವು ರಾಜ್ಯಗಳು ಪರಿಹಾರ ಘೋಷಣೆ ಮಾಡಿಲ್ಲ. ಕರ್ನಾಟಕ ಸರ್ಕಾರ ಕಳೆದ ವಾರವೇ ವೈದ್ಯರ ತಂಡ ಮತ್ತು ₹10 ಕೋಟಿ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.

ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮಧ್ಯಂತರ ಪರಿಹಾರವಾಗಿ ₹500 ಕೋಟಿ ಘೋಷಿಸಿದ್ದಾರೆ. ಪ್ರಸ್ತುತ ₹19 ಸಾವಿರ ಕೋಟಿಗೂ ಹೆಚ್ಚು ನಷ್ಟ ಅಂದಾಜಿಸಲಾಗಿದ್ದು, ಕನಿಷ್ಠ ₹2000 ಕೋಟಿ ಪರಿಹಾರಕ್ಕಾಗಿ ಸಿಎಂ ಪಿಣರಾಯಿ ವಿಜಯನ್‌ ಮನವಿ ಮಾಡಿದ್ದರು. ಈ ಹಿಂದೆ ರಾಜನಾಥ ಸಿಂಗ್‌ ಕೇರಳ ಭೇಟಿ ಬಳಿಕ ₹100 ಕೋಟಿ ಪರಿಹಾರ ಘೋಷಿಸಿದ್ದರು. ಕೇಂದ್ರದ ಪರಿಹಾರ ಹೊರತು ಪಡಿಸಿ ಹಲವು ರಾಜ್ಯಗಳು ಸಹ ಈಗಾಗಲೇ ಪರಿಹಾರ ಘೋಷಿಸಿವೆ. 

ಸಿಎಂ ಪಿಣರಾಯಿ ವಿಜಯನ್‌ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದು, ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ಹೆಲಿಕಾಪ್ಟರ್‌ ಹಾಗೂ ದೋಣಿಗಳಿಗಾಗಿ ಮನವಿ ಮಾಡಿದ್ದಾರೆ. 

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ₹25 ಕೋಟಿ, ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌ ಮತ್ತು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರತಿ ರಾಜ್ಯದಿಂದ ₹10 ಕೋಟಿ ಹಾಗೂ ಆಂಧ್ರ ಪ್ರದೇಶ ಸಿಎಂ ಎನ್‌.ಚಂದ್ರಬಾಬು ನಾಯ್ಡು ₹5 ಕೋಟಿ ಪರಿಹಾರ ಘೋಷಿಸಿದ್ದಾರೆ. ಕುಡಿಯುವ ನೀರು ಶುದ್ಧಿಕರಣಕ್ಕಾಗಿ ₹2 ಕೋಟಿ ಮೌಲ್ಯದ ಶುದ್ಧೀಕರಣ ಯಂತ್ರಗಳನ್ನು ತೆಲಂಗಾಣ ಸರ್ಕಾರ ಒದಗಿಸಿದೆ. 

ಒಡಿಶಾ ಸಿಎಂ ನವೀನ್‌ ಪಟ್ನಾಯಟ್‌ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಕೋಟಿ ಹಾಗೂ ಅಗ್ನಿಶಾಮಕ, ರಕ್ಷಣಾ ಪಡೆಯ 245 ಸಿಬ್ಬಂದಿ ಮತ್ತು ರಕ್ಷಣಾ ದೋಣಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ₹10 ಕೋಟಿ, ಹರಿಯಾಣ ಸಿಎಮ ಮನೋಹರ್‌ ಲಾಲ್‌ ಖಟ್ಟರ್‌ ₹10 ಕೋಟಿ, ತಮಿಳುನಾಡು ₹5 ಕೋಟಿ ಹಾಗೂ ಪುದುಚೇರಿ ₹2 ಕೋಟಿ ಪರಿಹಾರವನ್ನು ಘೋಷಿಸಿವೆ. 

ಆದರೆ, ಬಿಜೆಪಿ ಆಡಳಿತವಿರುವ ಹೆಚ್ಚಿನ ರಾಜ್ಯಗಳು ಜಲಪ್ರಳಯದಲ್ಲಿ ನಲುಗಿರುವ ಕೇರಳಕ್ಕೆ ಈವರೆಗೂ ಯಾವುದೇ ಸಹಾಯ ಘೋಷಣೆಯಾಗಿರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗೋವಾ, ಚತ್ತೀಸ್‌ಗಢ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಈಶಾನ್ಯ ರಾಜ್ಯಗಳು, ಜಾರ್ಖಂಡ್‌, ಜಮ್ಮು–ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳ(ತೃಣಮೂಲ ಕಾಂಗ್ರೆಸ್‌) ರಾಜ್ಯಗಳಿಂದ ಪರಿಹಾರ ಘೋಷಣೆಯಾಗಿಲ್ಲ. 

ಎಸ್‌ಬಿಐ ಸಹಕಾರ: ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹2 ಕೋಟಿ ನೀಡುವುದಾಗಿ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಘೋಷಿಸಿದೆ ಹಾಗೂ ಕೇರಳದಲ್ಲಿ ತನ್ನ ಬ್ಯಾಂಕ್‌ ಸೇವಾ ಶುಲ್ಕಗಳನ್ನು ಮನ್ನಾ ಮಾಡಿದೆ.  

ರಾಜ್ಯ ಪರಿಹಾರ ಮೊತ್ತ (₹ ಕೋಟಿಗಳಲ್ಲಿ)
ಕರ್ನಾಟಕ                 10
ತೆಲಂಗಾಣ                 25
ದೆಹಲಿ                 10
ಪಂಜಾಬ್‌                 10
ಆಂಧ್ರ ಪ್ರದೇಶ                  5
ಒಡಿಶಾ                  5
ಬಿಹಾರ                 10
ಹರಿಯಾಣ                 10
ತಮಿಳುನಾಡು                  5
ಪುದುಚೇರಿ                  2
ಗೋವಾ                –––
ಚತ್ತೀಸ್‌ಗಢ                –––
ಗುಜರಾತ್‌                10
ಮಧ್ಯ ಪ್ರದೇಶ –––
ರಾಜಸ್ಥಾನ                –––
ಉತ್ತರ ಪ್ರದೇಶ               ––––
ಹಿಮಾಚಲ ಪ್ರದೇಶ              –––
ಮಹಾರಾಷ್ಟ್ರ                20
ಜಾರ್ಖಂಡ್‌(ಹಾಗೂ ಇತರ ರಾಜ್ಯಗಳು)                ––––

 

ಇನ್ನಷ್ಟು: 

ಕೇರಳ ಪ್ರವಾಹ: ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ; ₹500 ಕೋಟಿ ಪರಿಹಾರ ಘೋಷಣೆ

ಕೊಡಗಿನಲ್ಲಿ ರಕ್ಷಣ ಕಾರ್ಯಕ್ಕೆ ಇಳಿದಿರುವ ಯುವಕರೇ ದಯವಿಟ್ಟು ಗಮನಿಸಿ! 

2,500ಕ್ಕೂ ಹೆಚ್ಚಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ: ಕುಮಾರಸ್ವಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !