ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ: ರಾಮನಾಥ ಕೋವಿಂದ್

7

ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ: ರಾಮನಾಥ ಕೋವಿಂದ್

Published:
Updated:

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಅನಗತ್ಯ ವಾದ, ವಿವಾದ ಮತ್ತು ಅಪ್ರಸ್ತುತ ಚರ್ಚೆಗಳಿಂದ ವಿಚಲಿತರಾಗದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ದೇಶದ ನಾಗರಿಕರಿಗೆ ಸಲಹೆ ಮಾಡಿದ್ದಾರೆ.

72ನೇ ಸ್ವಾತಂತ್ರೋತ್ಸವದ ಮುನ್ನಾದಿನವಾದ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂಸೆಗಿಂತ ಅಹಿಂಸೆ ಹೆಚ್ಚು ಶಕ್ತಿಯುತವಾದದ್ದು ಎಂದು ಪ್ರತಿಪಾದಿಸಿದರು.

ದೇಶದಲ್ಲಿ ನಡೆಯುತ್ತಿರುವ ಗುಂಪುದಾಳಿ ಮತ್ತು ಹತ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಅಭಿವೃದ್ಧಿಯ ಪಥದಲ್ಲಿ ಸಾಗಿರುವ ದೇಶದ ಪ್ರಗತಿಗೆ ಅಡ್ಡವಾಗಬಾರದು ಎಂದರು.

ಬಹುಕಾಲದ ಗುರಿಗಳು ಈಡೇರುವ ನಿರ್ಣಾಯಕ ಕಾಲಘಟದಲ್ಲಿ ದೇಶ ಇದೆ. ಅಭಿವೃದ್ಧಿಯ ನಿರ್ಣಾಯಕ ಹಂತದಲ್ಲಿ ಇಂತಹ ಘಟನೆಗಳು ನಾವು ವಿಚಲಿತರಾಗಬಾರದು ಎಂದು ಸಲಹೆ ಮಾಡಿದ್ದಾರೆ.

‘ಮಹಿಳೆಯರಿಗೆ ಅವರಿಗಿಷ್ಟದ ಬದುಕಿನ ಆಯ್ಕೆಯ ಸ್ವಾತಂತ್ರ್ಯ ನೀಡಬೇಕು. ಅವರ ಖಾಸಗಿತನದ ರಕ್ಷಣೆ ಮತ್ತು ಸುರಕ್ಷಿತ ಭಾವ ಮೂಡಿಸುವುದು ನಮ್ಮ ಕರ್ತವ್ಯ’ ಎಂದರು.

 

 

 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !