ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳ್ಳರೆಂಬ ಗಾಳಿಸುದ್ದಿ: ಹೆಚ್ಚುತ್ತಿರುವ ಗುಂಪು ಹಲ್ಲೆ

Last Updated 1 ಸೆಪ್ಟೆಂಬರ್ 2019, 5:17 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಮಕ್ಕಳ ಕಳ್ಳರು ಎಂಬ ಗಾಳಿಸುದ್ದಿ ಹರಿದಾಡುತ್ತಿರುವುದು ಹೆಚ್ಚಾಗಿದೆ. ಮೂರು ಪ್ರತ್ಯೇಕ ಘಟನೆಗಳಲ್ಲಿ ದೆಹಲಿ ನಿವಾಸಿ, ಭಿಕ್ಷುಕಿ ಸೇರಿದಂತೆ ಒಟ್ಟು ಆರು ಜನರ ಮೇಲೆ ಗುಂಪು ಹಲ್ಲೆ ನಡೆದಿದೆ.

ಗಾಳಿಸುದ್ದಿ ಹರಡುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ(ಎನ್‌ಎಸ್‌ಎ) ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದರೂ, ಇಂತಹ ಕೃತ್ಯ ಎಸಗಿದ 82 ಜನರನ್ನು ಬಂಧಿಸಿದರೂಕಳೆದೊಂದು ವಾರದಿಂದ ಗುಂಪು ಹಲ್ಲೆ ಮುಂದುವರಿದಿದೆ.ಎನ್‌ಎಸ್‌ಎ ಅಡಿ ಯಾವುದೇ ಕಾರಣ ನೀಡದೇವ್ಯಕ್ತಿಯೊಬ್ಬನನ್ನು ಬಂಧಿಸಲು ಹಾಗೂ ಅನಿರ್ಧಿಷ್ಟಾವಧಿಗೆ ಬಂಧನದಲ್ಲಿಡಲು ಅವಕಾಶವಿದೆ.

ದೆಹಲಿ ನಿವಾಸಿ ಮೇಲೆ ಹಲ್ಲೆ: ಶುಕ್ರವಾರ ಮುಜಫ್ಫರನಗರಕ್ಕೆ ಬಂದಿದ್ದ ದೆಹಲಿ ನಿವಾಸಿಯೊಬ್ಬರನ್ನು ಮಕ್ಕಳ ಕಳ್ಳ ಎಂದು ಭಾವಿಸಿ, ಆನಂದಪುರಿ ಪ್ರದೇಶದ ನಿವಾಸಿಗಳು ಥಳಿಸಿದ್ದರು. ತನಿಖೆಯಿಂದ ಈತ ನಿರಪರಾಧಿ ಎಂದು ತಿಳಿದಿದೆ. ಮತ್ತೊಂದು ಘಟನೆಯಲ್ಲಿ ಬಲಿಯಾದಲ್ಲಿ ಭಿಕ್ಷುಕಿಯೊಬ್ಬಳು ಮಗುವಿನೊಂದಿಗೆ ಇದ್ದಿದ್ದನ್ನು ಕಂಡು ಮಕ್ಕಳ ಕಳ್ಳಿ ಎಂದು ಜನರು ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಭಿಕ್ಷುಕಿಯನ್ನು ರಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT