ಬಂತಿದೋ ಮುಂಗಾರು: ಕೇರಳ ತೀರಕ್ಕೆ ಮಾನ್ಸೂನ್ ಮೊದಲ ಚುಂಬನ

ಸೋಮವಾರ, ಜೂನ್ 17, 2019
26 °C

ಬಂತಿದೋ ಮುಂಗಾರು: ಕೇರಳ ತೀರಕ್ಕೆ ಮಾನ್ಸೂನ್ ಮೊದಲ ಚುಂಬನ

Published:
Updated:

ನವದೆಹಲಿ: ಕೇರಳ ಕಡಲ ತೀರಕ್ಕೆ ಮುಂಗಾರು ಮಾರುತಗಳು ಶನಿವಾರ ಮುಂಜಾನೆ ಅಪ್ಪಳಿಸಿವೆ. ಮುಂಗಾರು ಆಗಮನವನ್ನು ಹವಾಮಾನ ಇಲಾಖೆ ದೃಢಪಡಿಸಿದೆ. 2016ರಲ್ಲಿಯೂ ಇದೇ ದಿನ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿದ್ದವು. ದೇಶದಲ್ಲಿ ಇನ್ನು ಮುಂದಿನ ನಾಲ್ಕು ತಿಂಗಳ ಮಳೆಗಾಲಕ್ಕೆ ಮುಂಗಾರು ಮಾರುತಗಳು ಶ್ರೀಕಾರ ಬರೆದಿವೆ.

‘ಮುಂಗಾರು ಮಾರುತಗಳು ಇಂದು (ಜೂನ್ 8) ಕೇರಳ ಪ್ರವೇಶಿಸಿದವು’ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ. ಮುಂಗಾರು ಪ್ರಭಾವದಿಂದ ಕೇರಳದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ.

ಇದನ್ನೂ ಓದಿ: ದುರ್ಬಲ ಮುಂಗಾರು– ಬರ ಭೀತಿ

ಕರ್ನಾಟಕ ರಾಜ್ಯಕ್ಕೆ ಮುಂಗಾರು ಪ್ರವೇಶ ಎರಡು ದಿನ ತಡವಾಗಲಿದ್ದು, ಜೂ.9 ಅಥವಾ 10ರಂದು ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಹಿಂದೆ ತಿಳಿಸಿತ್ತು. ದೆಹಲಿಯಲ್ಲಿ ಜೂನ್ 29ರಿಂದ ಮುಂಗಾರು ಮಳೆ ಆರಂಭವಾಗಬಹುದು ಎಂದು ಇಲಾಖೆ ಭವಿಷ್ಯ ನುಡಿದಿದೆ.


ಅಲಹಾಬಾದ್‌ನಲ್ಲಿ ಮರಿಯನ್ನು ಸುರಕ್ಷಿತ ತಾಣಕ್ಕೆ ಹೊತ್ತೊಯ್ದ ತಾಯಿ ನಾಯಿ (ಎಎಫ್‌ಪಿ ಚಿತ್ರ)

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !