ಮೆರವಣಿಗೆಯಲ್ಲಿ ಸಹಸ್ರಾರು ಅಭಿಮಾನಿಗಳು, ಪಾರ್ಥೀವ ಶರೀರದ ಜತೆ ಮೋದಿ, ಶಾ ಹೆಜ್ಜೆ

7

ಮೆರವಣಿಗೆಯಲ್ಲಿ ಸಹಸ್ರಾರು ಅಭಿಮಾನಿಗಳು, ಪಾರ್ಥೀವ ಶರೀರದ ಜತೆ ಮೋದಿ, ಶಾ ಹೆಜ್ಜೆ

Published:
Updated:

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಗೆ ಪಾರ್ಥೀವ ಶರೀರದ ಮೆರವಣಿಗೆ ತೆರಳುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ತಮ್ಮ ನಾಯಕನ ಪಾರ್ಥಿವ ಶರೀದ ಜತೆಜತೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.

ಅಂತ್ಯಕ್ರಿಯೆ ನೆರವೇರುವ ಸ್ಮೃತಿ ಸ್ಥಳದ ವರೆಗೆ ನಾಲ್ಕು ಕಿ.ಮೀ. ದೂರ ಸಾಗುತ್ತಿರುವ ಮೆರವಣಿಗೆಯಲ್ಲಿ ಕಿಕ್ಕಿರಿದು ಜನ ಸೇರಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ನೆಚ್ಚಿನ ನಾಯಕನ ಯಾತ್ರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.  


ವಾಜಪೇಯಿ ಅವರ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದಾರೆ. ಚಿತ್ರ: ಎಎನ್‌ಐ

ನಾಯಕನಿಗೆ ವಿದಾಯ ಹೇಳುವ ಜತೆಗೆ, ಮೊಬೈಲ್‌ಗಳಲ್ಲಿ ವಿಡಿಯೊ ಮತ್ತು ಚಿತ್ರಗಳನ್ನು ತೆಗೆಯುತ್ತಿದ್ದಾರೆ. ಮೆರವಣಿಗೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಅನಾರೋಗ್ಯ ನಿಮಿತ್ತ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ಗುರುವಾರ ಸಂಜೆ 5.5ಕ್ಕೆ ಕೊನೆಯುಸಿರೆಳೆದಿದ್ದರು. 

‘ಅಜಾತಶತ್ರು’ ಎಂದೇ ಬಣ್ಣಿಸಲ್ಪಟ್ಟಿದ್ದ ಅವರು ಸರ್ವರ ಮೆಚ್ಚಿನ ನಾಯಕರಾಗಿದ್ದರು.

* ಇದನ್ನೂ ಓದಿ...
ಸ್ಮೃತಿ ಸ್ಥಳದತ್ತ ವಾಜಪೇಯಿ ಪಾರ್ಥೀವ ಶರೀರ ಮೆರವಣಿಗೆ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !