ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ದಾಳಿಗೆ ಕೋಮು ಬಣ್ಣ ಬೇಡ: ಮುಕ್ತಾರ್‌ ಅಬ್ಬಾಸ್‌ ನಖ್ವಿ

ಕೇಂದ್ರ ಸಚಿವ
Last Updated 29 ಜೂನ್ 2019, 19:00 IST
ಅಕ್ಷರ ಗಾತ್ರ

ಮುಂಬೈ: ಗುಂಪು ದಾಳಿ ಘಟನೆಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಹಚ್ಚಬಾರದು ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಹಜ್‌ ಭವನದ ನವೀಕೃತ ಸಭಾಂಗಣ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಖ್ವಿ, ‘ಗುಂಪು ದಾಳಿ ನಡೆಸುವುದು ಅಪರಾಧ ವಿಚಾರವಾಗಿದೆ. ಇಂತಹ ಘಟನೆಗಳು ಖಂಡನೀಯ ಹಾಗೂ ಇವುಗಳನ್ನು ರಾಜಕೀಯಗೊಳಿಸುವುದೂ ಸರಿಯಲ್ಲ‍’ ಎಂದರು.

ಕಳೆದ ವಾರ ಜಾರ್ಖಂಡ್‌ನಲ್ಲಿ 24 ವರ್ಷದ ವ್ಯಕ್ತಿ ಮೇಲೆ ಗುಂಪು ದಾಳಿ ನಡೆದಿತ್ತು. ಘಟನೆಯಲ್ಲಿ ತಬ್ರೇಜ್‌ ಅನ್ಸಾರಿ ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಗುಂಪೊಂದು ಹಲ್ಲೆಗೈದಿತ್ತು. ಯುವಕನಿಗೆ ‘ಜೈ ಶ್ರೀರಾಮ್‌, ಜೈ ಹನುಮಾನ್‌’ ಹೇಳು ಎಂದು ಹಲ್ಲೆಗೈದ ಗುಂಪು ಒತ್ತಾಯಿಸಿತ್ತು. ಕೆಲ ದಿನಗಳ ನಂತರ ಗಾಯದಿಂದ ಯುವಕ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT