ಬುಧವಾರ, ನವೆಂಬರ್ 13, 2019
23 °C

ದೇಶದಲ್ಲಿ ಉದ್ಯೋಗಕ್ಕೆ ಕೊರತೆ ಇಲ್ಲ - ಕೇಂದ್ರ ಸಚಿವ ಸಂತೋಷ್ ಗಂಗವಾರ್

Published:
Updated:

ನವದೆಹಲಿ: ಭಾರತದಲ್ಲಿ ಉದ್ಯೋಗಕ್ಕೆ ಕೊರತೆ ಇಲ್ಲ. ಬದಲಿಗೆ ಉತ್ತರ ಭಾರತದ ಮಕ್ಕಳಲ್ಲಿ ಉದ್ಯೋಗಕ್ಕೆ ತಕ್ಕಂತೆ ಕೌಶಲ್ಯತೆ ಇಲ್ಲ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗವಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ಉದ್ಯೋಗದಾತರು ಬಂದು ಸಂದರ್ಶನ ಮಾಡಿದರೆ, ಉತ್ತರಭಾರತದ ಮಕ್ಕಳಲ್ಲಿ ಕೆಲಸಕ್ಕೆ ತಕ್ಕಂತೆ ಕುಶಲತೆ ಇಲ್ಲ ಎಂದು ಹೇಳುತ್ತಾರೆ. ಸರ್ಕಾರವೇ ಉದ್ಯೋಗಕ್ಕೆ ತಕ್ಕಂತೆ ತರಬೇತಿ ನೀಡಲಿದೆ ಎಂದರು.

ನಾನು ಅದೇ ಖಾತೆಯನ್ನು ನೋಡಿಕೊಳ್ಳುತ್ತಿರುವುದರಿಂದ ಪ್ರತಿನಿತ್ಯ ಗಮನಿಸುತ್ತಿದ್ದೇನೆ. ದೇಶದಲ್ಲಿ ಯಾವುದೇ ನಿರುದ್ಯೋಗ ಸಮಸ್ಯೆ ಇಲ್ಲ. ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಾನು ಪ್ರತಿನಿತ್ಯ ಸ್ಥಿತಿಗತಿಗಳನ್ನು ಅವಲೋಕಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ...45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ: ಎನ್‌ಎಸ್‌ಎಸ್‌ಒ ವರದಿ

ಪ್ರತಿಕ್ರಿಯಿಸಿ (+)