ಭಾನುವಾರ, ಡಿಸೆಂಬರ್ 8, 2019
25 °C
ಉತ್ತರಾಖಂಡ; ಕೈಲಾಸ–ಮಾನಸ ಸರೋವರ ಕಾಲುಹಾದಿಯ ಹಳ್ಳಿಗಳ ಜನರಿಗೆ ಚೀನಾದ ಧಾನ್ಯವೇ ಗತಿ

ಭಾರತದ ಪಡಿತರಕ್ಕಾಗಿ ಗಡಿ ಗ್ರಾಮದ ಜನರ ಕಾತರ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಚೀನಾ ಮತ್ತು ನೇಪಾಳ ಗಡಿಗೆ ಹೊಂದಿಕೊಂಡಿರುವ ಉತ್ತರಾಖಂಡದ ವ್ಯಾಸ ಕಣಿವೆಯ ಹಳ್ಳಿಗಳ ಜನರಿಗೆ ಪಡಿತರದ ಕೊರತೆ ಉಂಟಾಗಿದೆ. ಈ ಜನರಿಗೆ ಸರ್ಕಾರ ಮೀಸಲಿರಿಸಿರುವ ಪಡಿತರದ ಪ್ರಮಾಣವೂ ಕಡಿಮೆ ಇದೆ. ಸೆಪ್ಟೆಂಬರ್‌ನಲ್ಲಿನ ಮೇಘಸ್ಫೋಟ ಮತ್ತು ಭೂಕುಸಿತದಿಂದ ಕಾಲುದಾರಿ ಸಂಪರ್ಕವೂ ಕಡಿದುಹೋಗಿರುವ ಈ ಹಳ್ಳಿಗಳಿಗೆ ಪಡಿತರ ಪೂರೈಕೆ ಆಗಿಲ್ಲ. ಸದ್ಯ ಈ ಜನರು ಗಡಿ ದಾಟಿ, ಸಮೀಪದ ನೇಪಾಳದ ಹಳ್ಳಿಗಳಿಂದ ದವಸ–ಧಾನ್ಯಗಳನ್ನು ಖರೀದಿಸುತ್ತಿದ್ದಾರೆ. ನೇಪಾಳದ ಹಳ್ಳಿಗಳಲ್ಲಿ ಸಿಗುವುದು ಚೀನಾದ ನೆಲದಲ್ಲಿ ಬೆಳೆದ ಆಹಾರ ಪದಾರ್ಥಗಳು ಮಾತ್ರ. ಪಡಿತರವನ್ನು ತಲುಪಿಸಲು ಹೆಲಿಕಾಪ್ಟರ್‌ನ ಅವಶ್ಯಕತೆ ಇದೆ ಎಂದು ಪಿತೋರ್‌ಗಡದ ಧಾರಾಚಲ ಉಪ ವಿಭಾಗಾಧಿಕಾರಿ ಆರ್‌.ಕೆ.ಪಾಂಡೆ ಅವರು ಸೇನೆಗೆ ಮನವಿ ಸಲ್ಲಿಸಿದ್ದಾರೆ. ಈವರೆಗೆ ಯಾವುದೇ ವ್ಯವಸ್ಥೆ ಆಗದ ಕಾರಣ ಪಾಂಡೆ ಕೈಚೆಲ್ಲಿ ಕುಳಿತಿದ್ದಾರೆ.

 

ವ್ಯಾಸ ಕಣಿವೆಯಲ್ಲಿರುವ ಹಳ್ಳಿಗಳು 5

ಈ ಹಳ್ಳಿಗಳ ಜನಸಂಖ್ಯೆ 2,000

ಈ ಹಳ್ಳಿಗಳಿಗೆ ಏಪ್ರಿಲ್‌ನಲ್ಲಿ ಪೂರೈಸಲಾದ ಪಡಿತರದ ಪ್ರಮಾಣ 72.5 ಕ್ವಿಂಟಾಲ್ ಆಗಿದೆ.  ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಇಷ್ಟು ಪ್ರಮಾಣದ ಪಡಿತರವನ್ನು ನೀಡಲಾಗುತ್ತದೆ

ಕುಟುಂಬವೊಂದಕ್ಕೆ ಪ್ರತಿ ತಿಂಗಳಿಗೆ ಮೀಸಲಿರಿಸಿರುವ ಗೋಧಿಯ ಪ್ರಮಾಣ 5 ಕೆ.ಜಿ.

ಕುಟುಂಬವೊಂದಕ್ಕೆ ಪ್ರತಿ ತಿಂಗಳಿಗೆ ಮೀಸಲಿರಿಸಿರುವ ಅಕ್ಕಿಯ ಪ್ರಮಾಣ 2 ಕೆ.ಜಿ.

******

ಆಧಾರ: ಪಿಟಿಐ ಚಿತ್ರಕೃಪೆ: ಗೂಗಲ್ ಅರ್ಥ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು