ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹಾಲಿ: ಪರವಾನಗಿ ರದ್ದುಮಾಡಿದ್ದಕ್ಕೆ ಅಧಿಕಾರಿಯನ್ನೇ ಕೊಂದ ಫಾರ್ಮಸಿ ಮಾಲೀಕ

Last Updated 30 ಮಾರ್ಚ್ 2019, 2:57 IST
ಅಕ್ಷರ ಗಾತ್ರ

ಮೊಹಾಲಿ: ತನ್ನ ಹೆಸರಿನಲ್ಲಿದ್ದಫಾರ್ಮಸಿಕಂಪನಿಯಪರವಾನಗಿಯನ್ನುಹತ್ತು ವರ್ಷಗಳ ಹಿಂದೆ ರದ್ದು ಪಡಿಸಿದ್ದಕ್ಕೆ ಆಕ್ರೋಶಗೊಂಡಿದ್ದ ಮಾಲೀಕ, ಪಂಜಾಬ್‌ನ ಆಹಾರ ಮತ್ತು ಔಷಧ ಆಡಳಿತದ(ಎಫ್‌ಡಿಎ) ಮಹಿಳಾಧಿಕಾರಿಯನ್ನುಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.ಬಳಿಕ ಆರೋಪಿಯೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ಹರಿಯಾಣದ ಪಂಚಕುಲಾ ನಿವಾಸಿಯಾದ 36 ವರ್ಷ ವಯಸ್ಸಿನ ನೇಹಾಶೋರೆ ಎನ್ನುವವರೆ ಕೊಲೆಯಾದ ಅಧಿಕಾರಿ. ಅವರು ಇಲ್ಲಿನಎಫ್‌ಡಿಎ ವಿಭಾಗೀಯ ಪರವಾನಗಿ ಪ್ರಾಧಿಕಾರದಲ್ಲಿ 2016ರಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಅಧಿಕಾರಿ ಮೇಲೆ ದಾಳಿ ನಡೆದಾಗ ಅವರ ಸಂಬಂಧಿಯೊಬ್ಬರ ಆರು ವರ್ಷದ ಮಗಳು ಕಚೇರಿಯಲ್ಲಿ ಇದ್ದಳು ಎಂದು ಪೊಲೀಸರು ಹೇಳಿದ್ದಾರೆ.

ದಾಳಿಕೋರ ಬಲ್ವಿಂದರ್‌ ಸಿಂಗ್‌(50) ಎಂಬಾತ ಮೊರಿಂಡಾದಲ್ಲಿ ಫಾರ್ಮಸಿ ಕಂಪನಿ ನಡೆಸುತ್ತಿದ್ದ. ಇದರ ಪರವಾನಗಿಯನ್ನು 2009ರಲ್ಲಿಯೇ ಶೋರೆ ರದ್ದು ಪಡಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿತ್ತು.

ಪೊಲೀಸ್‌ ಮೂಲಗಳ ಪ್ರಕಾರ, ಅರೋಪಿಯು ಅಧಿಕಾರಿಯ ಕಚೇರಿ ಬಳಿಗೆ ಬೆಳಗ್ಗೆ ಸುಮಾರು 10.30ರ ಸಮಯಕ್ಕೆ ಬಂದಿದ್ದಾನೆ. ಬಳಿಕ ಕಚೇರಿ ಒಳನುಗ್ಗಿದ ಆತ ತನ್ನ ಬಳಿ ಇದ್ದ ರಿವಾಲ್ವಾರ್‌ನಿಂದ ಎರಡು ಗುಂಡುಗಳನ್ನು ಹಾರಿಸಿ ‘ಹ್ಯಾಪಿ ಹೋಳಿ’ ಎಂದು ಜೋರಾಗಿ ಕೂಗಿದ್ದಾನೆ.

‘ಒಂದು ಗುಂಡು ಶೋರೆ ಅವರು ತಲೆ ಹಾಗೂ ಮತ್ತೊಂದು ಗುಂಡು ಎದೆ ಭಾಗವನ್ನು ಹೊಕ್ಕಿದೆ. ಬಳಿಕ ಬಲ್ವಿಂದರ್‌ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಗೇಟ್‌ ಬಳಿ ಜಮಾಯಿಸಿದ್ದ ಜನರು ಆತನನ್ನು ತಡೆದಿದ್ದಾರೆ. ಆಗ ಅವರತ್ತ ರಿವಾಲ್ವಾರ್‌ ತೋರಿಸಿ ಹೆದರಿಸಲು ಯತ್ನಿಸಿದ್ದಾನೆ. ಬಳಿಕ ಸ್ವತಃ ಎದೆ ಮತ್ತು ತಲೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೊಹಾಲಿಯ ಎಸ್‌ಎಸ್‌ಪಿ ಹರ್ಚರಣ್‌ ಸಿಂಗ್‌ ಭುಲ್ಲರ್‌ ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಶೋರೆ ಹಾಗೂ ಬಲ್ವಿಂದರ್‌ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಇಬ್ಬರೂ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

‘ಶೋರೆ ಅವರು ರೋಹಾರ್‌ ಜಿಲ್ಲೆಯ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿ 2009ರ ಸೆಪ್ಟೆಂಬರ್‌ನಲ್ಲಿ ನೇಮಕವಾಗಿದ್ದರು. ಆ ವೇಳೆ ಅವರು ಬಲ್ವಿಂದರ್‌ ಅವರ ಫಾರ್ಮಸಿಯಲ್ಲಿ ಶೋಧ ಕಾರ್ಯಾಕರಣೆ ನಡೆಸಿದ್ದರು. ಮಾದಕ ವ್ಯಸನಿಗಳು ಬಳಸುವ 35 ವಿಧದ ಮಾತ್ರೆಗಳು ಆಗ ಅಲ್ಲಿ ಸಿಕ್ಕಿದ್ದವು. ಆದರೆ ಅದಕ್ಕೆ ಪೂರಕವಾದ ಯಾವುದೇ ದಾಖಲೆಗಳು ಬಲ್ವಿಂದರ್‌ ಬಳಿ ಇರಲಿಲ್ಲ. ಹೀಗಾಗಿ ಶೋರೆ ಅವರು ಪರವಾನಗಿಯನ್ನು ರದ್ದುಗೊಳಿಸಿದ್ದರು’ ಎಂದೂಭುಲ್ಲರ್‌ ಮಾಹಿತಿ ನೀಡಿದ್ದಾರೆ.

ಕಳೆದ ಮಾರ್ಚ್‌ 9ರಂದುರೋಪರ್‌ ಜಿಲ್ಲಾಡಳಿತದಿಂದ ಶಸ್ತ್ರಾಸ್ತ್ರ ಬಳಕೆ ಪರವಾನಗಿ ಪಡೆದಿದ್ದ ಬಲ್ವಿಂದರ್‌, ಎರಡು ದಿನಗಳ ಹಿಂದಷ್ಟೇ ರಿವಾಲ್ವರ್‌ ಖರೀದಿಸಿದ್ದ.

ಶೋರೆ ಅವರಿಗೆ ಎರಡು ವರ್ಷದ ಮಗಳಿದ್ದು, ಪತಿ ವರುಣ್‌ ಮೊಂಗ ಅವರು ಬ್ಯಾಂಕ್‌ ಉದ್ಯೋಗಿಯಾಗಿದ್ದಾರೆ. ಘಟನೆ ವೇಳೆ ಕಚೇರಿಯಲ್ಲಿದ್ದ ಸಂಬಂಧಿಯೊಬ್ಬರ ಮಗಳು,ರಜೆ ಇದ್ದ ಕಾರಣ ಕಚೇರಿಗೆ ಬಂದಿದ್ದಳು. ಮೃತ ಆರೋಪಿ ಬಲ್ವಿಂದರ್‌ಗೆ ಪತ್ನಿ, ಒಬ್ಬ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT