ಸೋಮವಾರ, ಫೆಬ್ರವರಿ 17, 2020
28 °C

ಅತ್ಯುತ್ತಮ ಸ್ಮಾರ್ಟ್‌ ನಗರ ಪಟ್ಟಿಯಲ್ಲಿ ವಾರಾಣಸಿಗೆ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕ್ಷೇತ್ರ 20 ಅತ್ಯುತ್ತಮ ಸ್ಮಾರ್ಟ್‌ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, 20 ಅತ್ಯುತ್ತಮ ನಗರ ಮತ್ತು 20 ಹಿಂದುಳಿದ ನಗರಗಳನ್ನು ಜೋಡಿ ಮಾಡಿದ್ದು, ಇವೆರಡೂ ನಗರಗಳು ‘ಸಹೋದರ ನಗರಗಳಾಗಿ’ ಕಾರ್ಯನಿರ್ವಹಿಸಲಿದೆ. 

ಫೆ.20 ಕ್ಕೂ ಮೊದಲು ಅತ್ಯುತ್ತಮ ಮತ್ತು ಹಿಂದುಳಿದ ನಗರಗಳು ಒಪ್ಪಂದ ಪತ್ರ (ಎಂಒಯು)ಕ್ಕೆ ಸಹಿ ಹಾಕುವಂತೆ ಸಚಿವಾಲಯ ಸೂಚಿಸಿದೆ.

ಸಂಸ್ಕೃತಿಗಳಲ್ಲಿ ಸಾಮ್ಯತೆಯಿರುವ ನಗರಗಳನ್ನು ಜೋಡಿ ಮಾಡಲಾಗಿದ್ದು, ವಾರಾಣಸಿ, ಅಮೃತಸರದ ಜತೆ ಆಗಿದೆ.  

ಅಭಿವೃದ್ಧಿ ಹೊಂದಿದ ನಗರ: ಅಹಮದಾಬಾದ್‌ ಮೊದಲ ಸ್ಥಾನದಲ್ಲಿದ್ದು, ನಾಗ್ಪುರ, ರಾಂಚಿ, ಭೋಪಾಲ್‌, ಸೂರತ್‌, ಕಾನ್ಪುರ, ಇಂದೋರ್‌, ವಿಶಾಖಪಟ್ಟಣ, ವೆಲ್ಲೂರು, ವಡೋದರ, ನಾಸಿಕ್, ಆಗ್ರಾ, ವಾರಾಣಸಿ, ದಾವಣಗೆರೆ, ಕೋಟ, ಪುಣೆ, ಉದಯಪುರ, ಡೆಹರಾಡೂನ್‌, ಅಮರಾವತಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು