ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆಯ ಮೇಲೆ ದೇಶದ ಮೊದಲ ಬಹು ಮಾದರಿ ನಿಲ್ದಾಣ ಉದ್ಘಾಟನೆ

Last Updated 12 ನವೆಂಬರ್ 2018, 18:36 IST
ಅಕ್ಷರ ಗಾತ್ರ

ವಾರಾಣಸಿ:ಗಂಗಾ ನದಿ ಮೇಲೆ ದೇಶದ ಮೊದಲ ಬಹು ಮಾದರಿ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

ಕೋಲ್ಕತ್ತದಿಂದ ಹಡಗಿನಲ್ಲಿ ಒಳನಾಡು ಜಲಮಾರ್ಗದ ಮೂಲಕಬಂದ ಕಂಟೈನರ್‌ ಅನ್ನುತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ಇಳಿಸಿಕೊಳ್ಳುವ ಮೂಲಕ ಅವರು ಈ ನಿಲ್ದಾಣ ಕಾರ್ಯಾರಂಭಕ್ಕೆ ಅವರು ಚಾಲನೆ ನೀಡಿದರು. ಆಹಾರ ಮತ್ತು ಪಾನೀಯಗಳನ್ನು ಹೊತ್ತು ಕಳೆದ ಅಕ್ಟೋಬರ್‌ನಲ್ಲಿ ಈ ಹಡಗು ಕೋಲ್ಕತ್ತದಿಂದ ಹೊರಟಿತ್ತು.

ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರವು ಜಲಮಾರ್ಗ ವಿಕಾಸ ಯೋಜನೆಯಡಿ ಈ ನಿಲ್ದಾಣವನ್ನು ನಿರ್ಮಾಣ ಮಾಡಿದೆ.

ವಿಶ್ವಬ್ಯಾಂಕ್‌ ನೆರವಿನಿಂದ ನಿರ್ಮಿಸಲಾಗುತ್ತಿರುವ ಬಹುಮಾದರಿಯ ನಾಲ್ಕು ನಿಲ್ದಾಣಗಳ ಪೈಕಿ, ಇದು ಮೊದಲನೆಯದಾಗಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹5,369 ಕೋಟಿಯಾಗಿದ್ದು, ವಿಶ್ವಬ್ಯಾಂಕ್‌ ಮತ್ತು ಕೇಂದ್ರಸರ್ಕಾರ ಸಮಾನವಾಗಿ ಇದನ್ನು ಭರಿಸಲಿವೆ.

1,500ದಿಂದ 2,000 ಟನ್‌ನಷ್ಟು ತೂಕದ ಸರಕನ್ನು ಈ ವಾರಾಣಸಿ–ಹಲ್ದಿಯಾ ಜಲಮಾರ್ಗದಲ್ಲಿ ಸಾಗಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT