ಪುಣೆಯ ಬ್ಯಾಂಕ್‌ ಸರ್ವರ್ ಮೇಲೆ ಸೈಬರ್ ದಾಳಿ: ₹94 ಕೋಟಿ ಲೂಟಿ

7

ಪುಣೆಯ ಬ್ಯಾಂಕ್‌ ಸರ್ವರ್ ಮೇಲೆ ಸೈಬರ್ ದಾಳಿ: ₹94 ಕೋಟಿ ಲೂಟಿ

Published:
Updated:

ಪುಣೆ: ಇಲ್ಲಿನ ಕಾಸ್ಮಸ್‌ ಸಹಕಾರಿ ಬ್ಯಾಂಕ್‌ನ ಎಟಿಎಂ ಸರ್ವರ್ ಮೇಲೆ ಸೈಬರ್ ದಾಳಿ ನಡೆದಿದ್ದು, ₹94 ಕೋಟಿ ಲೂಟಿ ಮಾಡಲಾಗಿದೆ.

ಆಗಸ್ಟ್‌ 11ರಿಂದ 13ರ ಮಧ್ಯೆ ದಾಳಿ ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಜಾಲತಾಣ ವರದಿ ಮಾಡಿದೆ.

ಹಣ ಲೂಟಿಯಾಗಿರುವ ಬಗ್ಗೆ ಪುಣೆಯ ಗಣೇಶ್‌ಖಿಂಡ್ ರಸ್ತೆಯಲ್ಲಿರುವ ಕಾಸ್ಮಸ್‌ ಬ್ಯಾಂಕ್‌ನ ಪ್ರಧಾನ ಕಚೇರಿಯ ಅಧಿಕಾರಿ ಸುಹಾಸ್ ಗೋಖಲೆ ಸೋಮವಾರ ರಾತ್ರಿ ಚತುಶ್ರುಂಗಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಆಗಸ್ಟ್ 11ರಂದು ಎಟಿಎಂ ಸರ್ವರ್‌ ಮೇಲೆ ದಾಳಿ ನಡೆಸಿರುವ ಅಪರಿಚಿತ ಹ್ಯಾಕರ್‌ಗಳು ಗ್ರಾಹಕರ ವೀಸಾ ಮತ್ತು ರುಪೇ ಕಾರ್ಡ್‌ಗಳ ಮಾಹಿತಿ ಕಳವು ಮಾಡಿದ್ದಾರೆ. ನಂತರ 14,849 ವಹಿವಾಟುಗಳ ಮೂಲಕ ₹80 ಕೋಟಿ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಈ ಪೈಕಿ, 12 ಸಾವಿರ ವಹಿವಾಟುಗಳು ವೀಸಾ ಕಾರ್ಡ್‌ಗಳ ಮೂಲಕ ಮಾಡಲಾಗಿದೆ. ₹78 ಕೋಟಿಯನ್ನು ಬೇರೆ ದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ರುಪೇ ಕಾರ್ಡ್ ಬಳಸಿಕೊಂಡು 2,849 ವಹಿವಾಟು ನಡೆಸಲಾಗಿದ್ದು, ₹2 ಕೋಟಿಯನ್ನು ದೇಶದ ಒಳಗೆಯೇ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ಚತುಶ್ರುಂಗಿ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದನ್ನು ಟೈಮ್ಸ್‌ ಆಫ್‌ ಇಂಡಿಯಾ ವರದಿ ಉಲ್ಲೇಖಿಸಿದೆ.

‘ಆಗಸ್ಟ್‌ 13ರಂದು ಹ್ಯಾಕರ್‌ಗಳು ಬ್ಯಾಂಕ್‌ನ ಸ್ವಿಫ್ಟ್‌ ವರ್ಗಾವಣೆ ವ್ಯವಸ್ಥೆ ಬಳಸಿಕೊಂಡು ₹13.94 ಕೋಟಿಯನ್ನು ಹಾಂಕಾಂಗ್ ಬ್ಯಾಂಕ್‌ಗೆ ವರ್ಗಾಯಿಸಿದ್ದಾರೆ. ಎರಡು ದಿನಗಳಲ್ಲಿ ಬ್ಯಾಂಕ್‌ಗೆ ₹94 ಕೋಟಿ ನಷ್ಟವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !