ತುರ್ತು ಪರಿಸ್ಥಿತಿ ನೆರವಿಗೆ ದೇಶವ್ಯಾಪಿ ಏಕೈಕ ಆ್ಯಪ್

7
ಮಹಿಳೆಯರ ನೆರವಿಗೆ ವಿಶೇಷ ಸೌಲಭ್ಯ

ತುರ್ತು ಪರಿಸ್ಥಿತಿ ನೆರವಿಗೆ ದೇಶವ್ಯಾಪಿ ಏಕೈಕ ಆ್ಯಪ್

Published:
Updated:

ಕೊಹಿಮಾ: ಸಾರ್ವಜನಿಕರು ಸಂಕಷ್ಟದಲ್ಲಿದ್ದಾಗ ಸಹಾಯ ಪಡೆ ಯಲು ದೇಶವ್ಯಾಪಿ ಏಕೈಕ ಸಂಖ್ಯೆಯ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. 

‘112 ಇಂಡಿಯಾ’ ಮೊಬೈಲ್‌ ಆ್ಯಪ್‌ನಲ್ಲಿ ಮಹಿಳೆಯರ ನೆರವಿ ಗಾಗಿ 'SHOUT' ಎನ್ನುವ ಸೌಲಭ್ಯ ವಿದ್ದು, ಇದನ್ನು ತುರ್ತು ಪ್ರತಿಸ್ಪಂದನಾ ನೆರವು ವ್ಯವಸ್ಥೆಗೆ (ಇಆರ್‌ಎಸ್‌ಎಸ್) ಸಂಪರ್ಕಿಸಲಾಗಿದೆ.

ಶನಿವಾರ ನಾಗಾಲ್ಯಾಂಡ್‌ನಲ್ಲಿ ಈ ಸೇವೆ ಉದ್ಘಾಟಿಸಿ ಮಾತನಾಡಿದ ರಾಜನಾಥ್, ‘ಸಂಕಷ್ಟದಲ್ಲಿರುವ ಮಹಿಳೆಯರು ಈ ಸೌಲಭ್ಯ ಬಳಸಿಕೊಂಡು ಸಮೀಪದಲ್ಲಿರುವ ಸ್ವಯಂಸೇವಕರು ಹಾಗೂ ತುರ್ತು ಪ್ರತಿಸ್ಪಂದನಾ ಕೇಂದ್ರದಿಂದ ನೆರವು ಪಡೆಯಬಹುದು. ಜಿಪಿಎಸ್ ಮೂಲಕ ಮಹಿಳೆಯರು ಎಲ್ಲಿದ್ದಾರೆ ಎನ್ನುವುದನ್ನು ಸ್ವಯಂಸೇವಕರು ಪತ್ತೆ ಮಾಡುತ್ತಾರೆ’ ಎಂದು ಹೇಳಿದ್ದಾರೆ.  

‘ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಮಹಿಳೆಯರು ಸುರಕ್ಷಿತರಾಗಿರುವ ರಾಷ್ಟ್ರ ಸಶಕ್ತವಾಗಿರುತ್ತದೆ ಮತ್ತು ಅದರ ಅಭಿವೃದ್ಧಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮಹಿಳೆಯರ ಸುರಕ್ಷತಾ ವಿಭಾಗ, ಲೈಂಗಿಕ ಶೋಷಣೆ ಪ್ರಕರಣಗಳ ನಿರ್ವಹಣೆಗೆ ತ್ವರಿತ ವಿಚಾರಣಾ ನ್ಯಾಯಾಲಯಗಳ ಸ್ಥಾಪನೆ ಸೇರಿದಂತೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ. 

ಈ ವಾರದ ಆರಂಭದಲ್ಲಿ ಹಿಮಾಚಲ ಪ್ರದೇಶದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಈ ಆ್ಯಪ್‌ ಸೇವೆಗೆ ಚಾಲನೆ ನೀಡಲಾಗಿತ್ತು. 

ಒಂದೇ ಸಹಾಯವಾಣಿ, ಹಲವು ನೆರವು
‘ಇಆರ್‌ಎಸ್‌ಎಸ್’ ಯೋಜನೆ ಅಡಿಯಲ್ಲಿ, ಪೊಲೀಸ್ (100), ಅಗ್ನಿಶಾಮಕ ದಳ (101), ಆರೋಗ್ಯ ಸೇವೆ (108), ಮಹಿಳೆಯರ (1090) ಸಹಾಯವಾಣಿ ಸಂಖ್ಯೆಗಳನ್ನು ಸೇರಿಸಲಾಗಿದೆ. ಇದರಿಂದಾಗಿ ಜನರು 112 ಸಹಾಯವಾಣಿ ಮೂಲಕವೇ ಎಲ್ಲಾ ರೀತಿಯ ನೆರವುಗಳನ್ನೂ ಪಡೆಯಬಹುದಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !