ಗುರುವಾರ , ಡಿಸೆಂಬರ್ 5, 2019
21 °C

ಅವಧಿಗೂ ಮೊದಲೆ ಅಧಿಕೃತ ನಿವಾಸ ತೆರವುಗೊಳಿಸಿದ ನ್ಯಾ.ಗೊಗೊಯಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನಿವೃತ್ತ ಸಿಜೆಐ ರಂಜನ್ ಗೊಗೊಯಿ ಅವರು ತಮ್ಮ ಅಧಿಕೃತ ನಿವಾಸ 5 ಕೃಷ್ಣ ಮೆನನ್ ಮಾರ್ಗ್‌ ನಿವಾಸವನ್ನು ಗುರುವಾರ ತೆರವುಗೊಳಿಸಿದ್ದಾರೆ.

ಇದೇ 17ರಂದು ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದರು. ನಿವಾಸ ತೆರವುಗೊಳಿಸಲು ನಿವೃತ್ತಿ ಬಳಿಕ ಒಂದು ತಿಂಗಳ ಕಾಲಾವಕಾಶ ಇದ್ದರೂ ಸಹ ಮೂರೇ ದಿನಗಳಲ್ಲಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ಈ ಹಿಂದೆ ನ್ಯಾ. ಜೆ.ಎಸ್. ಖೇಹರ್ ಅವರು ನಿವೃತ್ತರಾದ ವಾರದೊಳಗೆ ಅಧಿಕೃತ ನಿವಾಸ ತೆರವುಗೊಳಿಸಿದ್ದರು.

ಪ್ರತಿಕ್ರಿಯಿಸಿ (+)