ಶುಕ್ರವಾರ, ಫೆಬ್ರವರಿ 21, 2020
25 °C

ಇಂಟರ್‌ನೆಟ್‌ ಮೂಲಭೂತ ಹಕ್ಕಲ್ಲ: ಕೇಂದ್ರ ಸರ್ಕಾರ 

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಟರ್‌ನೆಟ್‌ ಹಕ್ಕನ್ನು ಮೂಲಭೂತ ಹಕ್ಕು ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇಂಟರ್‌ನೆಟ್‌ ಜೊತೆಗೆ ರಾಷ್ಟ್ರದ ಭದ್ರತೆಯೂ ಅಷ್ಟೇ ಮುಖ್ಯ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್ ಪ್ರತಿಪಾದಿಸಿದ್ದಾರೆ. ‌

ರಾಜ್ಯಸಭೆಯಲ್ಲಿ ಗುರುವಾರ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಇಂಟರ್‌ನೆಟ್‌ನ ಸಂವಹನ ಸಿದ್ಧಾಂತ ಮತ್ತು ನಿರೂಪಣೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆಯೇ ಹೊರತು ಅದು ಮೂಲಭೂತ ಹಕ್ಕು ಎಂದು ಹೇಳಿಲ್ಲ’ ಎಂದು ವಿವರಿಸಿದರು.

‘ಐಎಸ್‌ ಎಲ್ಲೆಡೆ ವ್ಯಾಪಿಸಲು ಇಂಟರ್‌ನೆಟ್‌ ಕಾರಣ. ಪಾಕಿಸ್ತಾನವು ಕಾಶ್ಮೀರದಲ್ಲಿ ಇಂಟರ್‌ನೆಟ್‌ ಮೂಲಕ ಹಿಂಸೆ ಮತ್ತು ಭಯೋತ್ಪಾದನೆಯನ್ನು ಹರಡಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯಲು ಅನುಕೂಲ ಮಾಡಿಕೊಡಬೇಕೇ’ ಎಂದೂ ಪ್ರಶ್ನಿಸಿದರು. ‌ 

ಇದೀಗ ಕಾಶ್ಮೀರದಲ್ಲಿ ದೂರವಾಣಿ ಮತ್ತು ಇಂಟರ್‌ನೆಟ್‌ ಸೌಲಭ್ಯ ಮುಂದುವರಿಸಲಾಗಿದ್ದು, ಬಿಳಿಪಟ್ಟಿಯಲ್ಲಿರುವ (ವೈಟ್‌ ಲಿಸ್ಟ್) 783 ವೆಬ್‌ಸೈಟ್‌ಗಳನ್ನು ಗ್ರಾಹಕರ ಬಳಕೆಗೆ ಮುಕ್ತಗೊಳಿಸಲಾಗಿದೆ. ಇ–ಮಂಡಿ ಮೂಲಕ ನಿತ್ಯ 450 ಲಾರಿಗಳಷ್ಟು ಸೇಬು ಹಣ್ಣುಗಳ ವಹಿವಾಟು ನಡೆಯುತ್ತಿದೆ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು