ಕೇರಳಕ್ಕೆ ₹3,048 ಕೋಟಿ ನೆರವು

7

ಕೇರಳಕ್ಕೆ ₹3,048 ಕೋಟಿ ನೆರವು

Published:
Updated:

ನವದೆಹಲಿ: ಆಗಸ್ಟ್‌ನಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದ ಕೇರಳಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ಕೇಂದ್ರ ಸರ್ಕಾರವು ₹3,048 ಕೋಟಿ ನೀಡಲಿದೆ. ಇದಲ್ಲದೆ ಆಂಧ್ರಪ್ರದೇಶಕ್ಕೆ ₹539 ಕೋಟಿ ಹಾಗೂ ನಾಗಾಲ್ಯಾಂಡ್‌ಗೆ ₹131 ಕೋಟಿ ನೀಡಲು ಸಮ್ಮತಿಸಿದೆ.

ಗೃಹ ಸಚಿವ ರಾಜನಾಥ್‌ ಸಿಂಗ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಗುರುವಾರ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ ₹4,700 ಕೋಟಿ ನೀಡಬೇಕು ಎಂದು ಕೇರಳ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಕೇರಳದ 14 ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿ 488 ಮಂದಿ ಸಾವನ್ನಪ್ಪಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !