ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಟರ್‌ ಮುಖರ್ಜಿ ಆಸ್ಪತ್ರೆಗೆ ದಾಖಲು

ಶೀನಾ ಬೋರಾ ಕೊಲೆ ಪ್ರಕರಣ
Last Updated 17 ಮಾರ್ಚ್ 2019, 18:05 IST
ಅಕ್ಷರ ಗಾತ್ರ

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಪೀಟರ್‌ ಮುಖರ್ಜಿಗೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಜೆ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇಂದ್ರ ಮುಂಬೈನ ಅರ್ಥೂರ್‌ ರೋಡ್‌ ಜೈಲಿನಲ್ಲಿರುವ ಮುಖರ್ಜಿಗೆ ಕೆಲ ದಿನಗಳಿಂದ ಎದೆ ನೋವು ಕಾಣಿಸಿಕೊಂಡಿತ್ತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಸಂಜೆ ನೋವು ಹೆಚ್ಚಾದ ಕಾರಣ ವೈದ್ಯರು ತಪಾಸಣೆ ನಡೆಸಿದ್ದು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಡಾ.ಸಂಜಯ್‌ ಸೂರ್ಸೆ ತಿಳಿಸಿದ್ದಾರೆ.

2012ರಲ್ಲಿ ನಡೆದಿದ್ದ ಇಂದ್ರಾಣಿ ಮುಖರ್ಜಿ ಮಗಳು ಶೀನಾ ಬೋರಾ ಕೊಲೆ ಪ್ರಕರಣ 2015ರಲ್ಲಿ ಬಯಲಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT