ರೈತರ ಆದಾಯದ ಬದಲು ಆತ್ಮಹತ್ಯೆಗಳು ದ್ವಿಗುಣ: ಮೋದಿ ಟೀಕಿಸಿದ ಶಿವಸೇನೆ

7

ರೈತರ ಆದಾಯದ ಬದಲು ಆತ್ಮಹತ್ಯೆಗಳು ದ್ವಿಗುಣ: ಮೋದಿ ಟೀಕಿಸಿದ ಶಿವಸೇನೆ

Published:
Updated:

ಮುಂಬೈ: ಕೇಂದ್ರ ಸರ್ಕಾರದ ರೈತರ ಯೋಜನೆಗಳಿಂದ ರೈತರ ಆದಾಯ ದ್ವಿಗುಣವಾಗುವ ಬದಲು ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಎನ್‌ಡಿಎ ಮಿತ್ರ ಪಕ್ಷ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. 

ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ಮೋದಿ ಅವರು ದೇಶದ 600 ಜಿಲ್ಲೆಗಳಲ್ಲಿನ ರೈತರೊಂದಿಗೆ ವಿಡಿಯೊ ಸಂವಾದ ನಡೆಸಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕಾಗಿ ಬಜೆಟ್‌ನಲ್ಲಿ 2.12 ಲಕ್ಷ ಕೋಟಿ ರೂಪಾಯಿ ತೆಗೆದಿರಿಸುವುದಾಗಿ ಹೇಳಿದ್ದಾರೆ. ಮೋದಿ ಅವರ ಈ ಹೇಳಿಕೆಯನ್ನು ಖಂಡಿಸಿರುವ ಶಿವಸೇನೆ ಈ ಘೋಷಣೆ  ಹೊಸದಲ್ಲ, 2014ರಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಹೇಳಿತ್ತು ಎಂದು ತಿರುಗೇಟು ನೀಡಿದೆ. 

ಮೋದಿ ಅವರು ಅದೇ ಹಳೇ ಕ್ಯಾಸೆಟ್‌ ಅನ್ನು ಹಾಕುತ್ತಿದ್ದಾರೆ, ಬಿಜೆಪಿಗೆ ಅಧಿಕಾರ ಕೊಟ್ಟ ರೈತರು ಇಂದು ಕೋಮಾ ಸ್ಥಿತಿಯಲ್ಲಿ ಇದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರೈತರು ಒಳ್ಳೆಯ ದಿನಗಳು ಬರಲಿವೆ, ನಮ್ಮ ಆದಾಯ ದ್ವಿಗುಣವಾಗಲಿದೆ ಎಂದು ಕಾಯುತ್ತಿದ್ದಾರೆ, ಆದರೆ ಆ ದಿನಗಳು ಬರಲೇ ಇಲ್ಲ ಎಂದು ಶಿವಸೇನೆ ವ್ಯಂಗ್ಯವಾಡಿದೆ.   

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !