‘ರಾಜಕಾರಣಿಗಳ ನಿದ್ರೆಗೆಡಿಸುತ್ತಿದೆ ಜಾಲತಾಣ’

7

‘ರಾಜಕಾರಣಿಗಳ ನಿದ್ರೆಗೆಡಿಸುತ್ತಿದೆ ಜಾಲತಾಣ’

Published:
Updated:
Prajavani

ಪಣಜಿ: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು ಸುದ್ದಿಯಿಂದ ರಾಜಕಾರಣಿಗಳು ರಾತ್ರಿ ನಿದ್ರೆಗೆಡುವಂತಾಗುತ್ತದೆ; ಹಾಗಾಗಿ ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಿದರೆ, ರಾಜಕಾರಣಿಗಳು ಒಳ್ಳೆಯ ನಿದ್ರೆ ಮಾಡಬಹುದು ಎಂದು ಗೋವಾ ಇಂಧನ ಸಚಿವ ನೀಲೇಶ್ ಕಬ್ರಲ್ ಹೇಳಿದ್ದಾರೆ.

ಗೋವಾದಲ್ಲಿ ಶಾಸಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಲಿ ಹಾಗೂ ಮಾಜಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಾಲತಾಣಗಳು ಒತ್ತಡ ಸೃಷ್ಟಿಸುತ್ತಿವೆ. ಕೆಲವೊಮ್ಮೆ ರಾಜಕಾರಣಿಗಳು ನೀಡದೇ ಇರುವ ಹೇಳಿಕೆಗಳನ್ನು, ಅವರೇ ನೀಡಿದ್ದಾರೆ ಎನ್ನುವ ರೀತಿ ಬಿಂಬಿಸಲಾಗುತ್ತದೆ. ಜನರು ಇದನ್ನೇ ವಾಸ್ತವ ಎಂದು ನಂಬಲಾರಂಭಿಸುತ್ತಾರೆ’ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !