ಕ್ಯಾನ್ಸರ್‌: ಗುಣಮುಖರಾಗುವ ವಿಶ್ವಾಸದಲ್ಲಿ ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ

7

ಕ್ಯಾನ್ಸರ್‌: ಗುಣಮುಖರಾಗುವ ವಿಶ್ವಾಸದಲ್ಲಿ ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ

Published:
Updated:
ಸೋನಾಲಿ ಬೇಂದ್ರೆ

ಮುಂಬೈ: ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಸಣ್ಣಪುಟ್ಟ ನೋವಿನ ಕಾರಣಕ್ಕಾಗಿ ನಾನು ಇತ್ತೀಚೆಗೆ ಕೆಲವು ಪರೀಕ್ಷೆಗಳಿಗೆ ಒಳಗಾದಾಗ ಕ್ಯಾನ್ಸರ್‌ ಇರುವುದು ತಿಳಿಯಿತು. ಅದು ದೇಹದ ಎಲ್ಲೆಡೆ ಹರಡುತ್ತಿದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು 43 ವರ್ಷದ ಸೋನಾಲಿ ತಿಳಿಸಿದ್ದಾರೆ.

‘ಇದನ್ನು ಎದುರಿಸದೆ ಬೇರೆ ದಾರಿ ಇಲ್ಲ. ಕ್ಯಾನ್ಸರ್‌ನ ಪ್ರತಿ ಹಂತವನ್ನೂ ಗೆಲ್ಲುವೆನೆಂಬ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ. ಆದರೆ, ಯಾವ ಬಗೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !