ಗುರುವಾರ , ನವೆಂಬರ್ 14, 2019
19 °C

ಐವರನ್ನು ರಕ್ಷಿಸಿ ನೀರುಪಾಲಾದ ಪ್ರವಾಸಿ ಮಾರ್ಗದರ್ಶಿ

Published:
Updated:

ಶ್ರೀನಗರ: ಪಹಲ್ಗಾಂ ಬಳಿಯ ಲಿಡ್ಡರ್‌ ನದಿಯಲ್ಲಿ ರ್‍ಯಾಫ್ಟ್ ಮಗುಚಿ ನೀರು ಪಾಲಾಗುತ್ತಿದ್ದ ಐವರನ್ನು ರಕ್ಷಿಸಿದ ಬಳಿಕ ಪ್ರವಾಸಿ ಮಾರ್ಗದರ್ಶಿಯೊಬ್ಬರು ಮುಳುಗಿ ಮೃತಪಟ್ಟಿದ್ದಾರೆ.

ರೌಫ್‌ ಅಹಮ್ಮದ್‌ ದಾರ್‌ ಮೃತಪಟ್ಟವರು. ಪಶ್ಚಿಮ ಬಂಗಾಳದ ಪ್ರವಾಸಿ ದಂಪತಿ ಸೇರಿದಂತೆ ಐವರು ಹಾಗೂ ರೌಫ್‌  ರ್‍ಯಾಫ್ಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗಾಳಿಗೆ ಸಿಲುಕಿ ರ್‍ಯಾಫ್ಟ್‌ ತಲೆಕೆಳಗಾಗಿ ಮಗುಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ರೌಫ್‌ ನದಿಗೆ ಧುಮುಕಿ ಮುಳುಗುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಅವರಿಗೆ ಮೇಲೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಐದು ಲಕ್ಷ ಪರಿಹಾರ: ರೌಫ್‌ ಅವರ ಕುಟುಂಬಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಪ್ರತಿಕ್ರಿಯಿಸಿ (+)