ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ, ಕೃಷ್ಣರ ವಂಶಾವಳಿ ಬಗ್ಗೆ ಸುಧಾಮೂರ್ತಿ ಪುಸ್ತಕ ರಚನೆ

Last Updated 28 ಅಕ್ಟೋಬರ್ 2018, 11:53 IST
ಅಕ್ಷರ ಗಾತ್ರ

ನವದೆಹಲಿ: ಖ್ಯಾತ ಸಾಹಿತಿ ಸುಧಾಮೂರ್ತಿ ಅವರು ಮಕ್ಕಳಿಗಾಗಿ ಬರೆದಿರುವ ಹೊಸ ಪುಸ್ತಕದಲ್ಲಿ ಪುರಾಣಪುರುಷರಾದ ರಾಮ ಹಾಗೂ ಕೃಷ್ಣನವಂಶಾವಳಿ ಹಾಗೂ ಸಂತತಿ ಕುರಿತಂತೆ ಬೆಳಕು ಚೆಲ್ಲಿದ್ದಾರೆ.

‘ದಿ ಅಪ್‌ಸೈಡ್‌ ಡೌನ್‌ ಕಿಂಗ್‌: ಅನ್‌ಯುಸ್‌ವಲ್‌ ಟೇಲ್ಸ್‌ ಅಬೌಟ್‌ ರಾಮ ಆ್ಯಂಡ್‌ ಕೃಷ್ಣಾ’ ಸುಧಾ ಅವರ ಮೂರನೇ ಪುಸ್ತಕ. ಇದಕ್ಕೂ ಮುನ್ನ, ಭಾರತದ ಪೌರಾಣಿಕ ಕಥೆಗಳನ್ನು ಆಧರಿಸಿ, ‘ದಿ ಸರ್ಪೆಂಟ್ಸ್‌ ರಿವೇಂಜ್‌: ಅನ್‌ಯುಸ್‌ವಲ್‌ ಟೇಲ್ಸ್‌ ಫ್ರಮ್‌ ದ ಮಹಾಭಾರತ’ ಹಾಗೂ ‘ದಿ ಮ್ಯಾನ್‌ ಫ್ರಮ್‌ ದ ಎಗ್‌: ಅನ್‌ಯುಸ್‌ವಲ್‌ ಟೇಲ್ಸ್‌ ಅಬೌಟ್‌ ದ ಟ್ರಿನಿಟಿ’ ಇನ್ನೆರಡು ಕೃತಿಗಳಾಗಿವೆ.

‘ಎಲ್ಲ ವಯಸ್ಸಿನ ಮಕ್ಕಳು ಪೌರಾಣಿಕ ಕಥೆಗಳನ್ನು ಆಸಕ್ತಿಯಿಂದ ಓದುತ್ತಿದ್ದು, ಇದೇ ಪ್ರೇರಣೆಯಿಂದ ಈ ಕೃತಿ ರಚಿಸಲು ಸಾಧ್ಯವಾಯಿತು. ‘ಪುಪ್ಪಿನ್‌ ಬುಕ್ಸ್‌’ ಸಂಸ್ಥೆ ಈ ಕೃತಿ ಮುದ್ರಿಸಿದ್ದು,ಇದೇ ಸರಣಿಯಲ್ಲಿ ಇನ್ನೆರಡು ಕೃತಿಗಳನ್ನು ರಚಿಸಲಿದ್ದೇನೆ’ ಇದೇ ವೇಳೆ ಅವರು ತಿಳಿಸಿದರು.

‘ಪುರಾಣದಲ್ಲಿ ಮಹಿಳೆಯ ಕುರಿತಾಗಿ ಮುಂದಿನ ಕೃತಿ ರಚಿಸಲಿದ್ದು, ಸೀತೆ ಅಥವಾ ದ್ರೌಪದಿ ಬಗ್ಗೆಯಲ್ಲ, ಬೇರೆ ಮಹಿಳೆಯರ ಬಗ್ಗೆ ಇರಲಿದೆ. ಋಷಿಮುನಿಗಳ ಕುರಿತಾಗಿ ಇನ್ನೊಂದು ಪುಸ್ತಕ ರಚಿಸಲಿದ್ದೇನೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT