ಸೋಮವಾರ, ನವೆಂಬರ್ 18, 2019
25 °C

ಶಿರೋಮಣಿ ಅಕಾಲಿ ದಳ: ರಾಜ್ಯಸಭೆ ನಾಯಕ ಸ್ಥಾನಕ್ಕೆ ಢೀಂಡಸ ರಾಜೀನಾಮೆ

Published:
Updated:

ಚಂಡೀಗಡ: ರಾಜ್ಯ ಸಭೆಯಲ್ಲಿ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ)ನಾಯಕ ಸ್ಥಾನಕ್ಕೆ ಸುಖದೇವ್‌ಸಿಂಗ್‌ ಢೀಂಡಸ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಅವರು ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಶನಿವಾರ ರಾಜೀನಾಮೆ ಪತ್ರವನ್ನು ನೀಡಿದ್ದು, ರಾಜೀನಾಮೆಗೆ ಕಾರಣವನ್ನು ತಿಳಿಸಿಲ್ಲ. ಆದರೆ, ‘ನಾಯಕತ್ವ ಬದಲಾವಣೆಯು ಪಕ್ಷದ ತೀರ್ಮಾನವಾಗಿದ್ದು, ಅದನ್ನು ಜೂನ್‌ ತಿಂಗಳಲ್ಲೇ ಸಂಸದೀಯ ವ್ಯವಹಾರಗಳ ಖಾತೆ ಸಚಿವರಿಗೆ ತಿಳಿಸಲಾಗಿತ್ತು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ದಲ್‌ಜೀತ್‌ ಸಿಂಗ್‌ ಅವರನ್ನು ಈಗಾಗಲೇ ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾಗಿ ಮತ್ತು ನರೇಶ್‌ ಗುಜರಾಲ್‌ ಅವರನ್ನು ಉಪನಾಯಕನಾಗೆ ಆಯ್ಕೆ ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.

ಪ್ರತಿಕ್ರಿಯಿಸಿ (+)