ಬೃಹತ್‌ ಸೂಪರ್ ಕಂಪ್ಯೂಟರ್‌ ಅನಾವರಣ

7
ವಿಶ್ವದಲ್ಲಿಯೇ ಮೊದಲ ಬಾರಿ ಕಾರ್ಯಾರಂಭ

ಬೃಹತ್‌ ಸೂಪರ್ ಕಂಪ್ಯೂಟರ್‌ ಅನಾವರಣ

Published:
Updated:
Deccan Herald

ಲಂಡನ್‌: ಮಾನವನ ಮಿದುಳಿನ ರೀತಿಯಲ್ಲೇ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಿರುವ ವಿಶ್ವದ ಬೃಹತ್‌ ಸೂಪರ್ ಕಂಪ್ಯೂಟರ್‌ ಮೊದಲ ಬಾರಿ ಕಾರ್ಯ ಆರಂಭಿಸಿದೆ.

ಇದು ಪ್ರತಿ ಸೆಕೆಂಡಿಗೆ 20 ಕೋಟಿಗೂ ಹೆಚ್ಚು ಕ್ರಿಯೆಗಳನ್ನು ಕೈಗೊಳ್ಳುತ್ತದೆ. ಈ ಕಂಪ್ಯೂಟರ್‌ನ ಚಿಪ್‌ಗಳು 10 ಕೋಟಿ ಟ್ರಾನ್ಸಿಸ್ಟರ್‌ಗಳನ್ನು ಹೊಂದಿವೆ.

20 ವರ್ಷಗಳ ಹಿಂದೆ ಈ ರೀತಿಯ ಕಂಪ್ಯೂಟರ್‌ ರೂಪಿಸುವ ಬಗ್ಗೆ ಕಲ್ಪನೆ ಮೂಡಿತ್ತು. ಕಳೆದ 10 ವರ್ಷಗಳ ಅವಧಿಯಲ್ಲಿ ಈ ಬೃಹತ್‌ ಕಂಪ್ಯೂಟರ್‌ ನಿರ್ಮಿಸಲಾಗಿದೆ. ಇದಕ್ಕಾಗಿ 15 ಮಿಲಿಯನ್‌ ಪೌಂಡ್‌ (₹141 ಕೋಟಿ) ವೆಚ್ಚ ಮಾಡಲಾಗಿದೆ.

‘ಸ್ಪಿನ್‌ನಕೇರ್‌’ ಯಂತ್ರ ಎಂದು ಕರೆಯಲಾಗುವ ಈ ಸೂಪರ್‌ ಕಂಪ್ಯೂರ್‌ ಅನ್ನು  ಬ್ರಿಟನ್‌ನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿ ವಿನ್ಯಾಸ ಗೊಳಿಲಾಗಿದೆ. ಯಾವುದೇ ಯಂತ್ರಕ್ಕಿಂತಲೂ ಇದು ಅತಿ ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

ಇತರ ಸಾಮಾನ್ಯ ಕಂಪ್ಯೂಟರ್‌ ಗಳಿಗಿಂತಲೂ ‘ಸ್ಪಿನ್‌ನಕೇರ್‌’ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಕಂಪ್ಯೂಟರ್‌ಗಳಂತೆ ಇದು ಅಪಾರವಾದ ಮಾಹಿತಿಯನ್ನು ಕೇವಲ ಎರಡು ಸ್ಥಳಗಳನ್ನು ಕೇಂದ್ರೀಕರಿಸಿಕೊಂಡು ರವಾನಿಸುವುದಿಲ್ಲ. ಬದಲಾಗಿ ಪರ್ಯಾಯ ಸಾವಿರಾರು ವಿಭಿನ್ನ ಕೇಂದ್ರಗಳಿಗೆ ಮಾಹಿತಿಯನ್ನು ರವಾನಿಸುವ ವ್ಯವಸ್ಥೆ ಹೊಂದಿದೆ. ವಿಭಿನ್ನ ಆಲೋಚನಾ ಶಕ್ತಿಯನ್ನು ಸಹ ಇದು ಒಳಗೊಂಡಿದೆ. 

 ನರ ವಿಜ್ಞಾನಿಗಳಿಗೆ ಸೂಪರ್‌ ಕಂಪ್ಯೂಟರ್‌ ನೆರವಾಗಲಿದೆ. ಮನುಷ್ಯರ ಮಿದುಳು ಯಾವ ರೀತಿ ಕಾರ್ಯನಿರ್ವಹಿಸಲಿದೆ ಎನ್ನುವುದರ ಪರಿಪೂರ್ಣ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲಿದೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !