ಸ್ವಚ್ಛತೆಯಲ್ಲಿ ಮೈಸೂರು, ಮಂಗಳೂರಿಗೂ ರ‍್ಯಾಂಕ್

7
ಸ್ವಚ್ಛ ಸರ್ವೇಕ್ಷಣೆ ವರದಿ 2018

ಸ್ವಚ್ಛತೆಯಲ್ಲಿ ಮೈಸೂರು, ಮಂಗಳೂರಿಗೂ ರ‍್ಯಾಂಕ್

Published:
Updated:
ಮೈಸೂರಿನ ಮೇಯರ್ ಮತ್ತು ಪಾಲಿಕೆ ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ಸ್ವಚ್ಛ ಸರ್ವೇಕ್ಷಣೆ 2018ರಲ್ಲಿ ಮೈಸೂರು ‘ಅತ್ಯಂತ ಸ್ವಚ್ಛ ಮಧ್ಯಮ ನಗರ’ ಮತ್ತು ಮಂಗಳೂರು ‘ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಮಧ್ಯಮ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

3 ಲಕ್ಷದಿಂದ 10 ಲಕ್ಷ ಜನಸಂಖ್ಯೆಯ ವರ್ಗದಲ್ಲಿ ಮೈಸೂರು ಮತ್ತು ಮಂಗಳೂರು ನಗರಪಾಲಿಕೆಗಳು ಕ್ರಮವಾಗಿ 1ನೇ ಮತ್ತು 5ನೇ ರ‍್ಯಾಂಕ್ ಪಡೆದಿವೆ.

ದಕ್ಷಿಣ ಭಾರತ ವಲಯದಲ್ಲಿ ಮೈಸೂರು ಜಿಲ್ಲೆಯ ಹುಣಸೂರು, ‘ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಪಟ್ಟಣ’ ಪ್ರಶಸ್ತಿ ಪಡೆದಿದೆ. 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳ ವರ್ಗದಲ್ಲಿ ಹುಣಸೂರಿಗೆ 4ನೇ ರ‍್ಯಾಂಕ್ ಲಭಿಸಿದೆ.

ಮೈಸೂರು

ಕಸ ಸಂಗ್ರಹ, ಬೀದಿಗಳ ಕಸ ಗುಡಿಸುವಿಕೆ ಮತ್ತು ತ್ಯಾಜ್ಯ ಸಂಸ್ಕರಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ಸ್ವಚ್ಛ ಸರ್ವೇಕ್ಷಣೆ ವರದಿಯಲ್ಲಿ ವಿವರಿಸಲಾಗಿದೆ. ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಈ ಬಾರಿ 8ನೇ ಸ್ಥಾನಕ್ಕೆ ಕುಸಿದಿದೆ (2016ರಲ್ಲಿ 1ನೇ ರ‍್ಯಾಂಕ್ ಮತ್ತು 2017ರಲ್ಲಿ 5ನೇ ರ‍್ಯಾಂಕ್).

9 ಲಕ್ಷ ಜನಸಂಖ್ಯೆ (2011ರ ಜನಗಣತಿ)

65 ವಾರ್ಡ್‌ಗಳು. ಪ್ರತಿ ವಾರ್ಡ್‌ನಲ್ಲೂ ಕಸ ಸಂಗ್ರಹಣೆಗೆ ಪರಿಣಾಮಕಾರಿ ವ್ಯವಸ್ಥೆ ಜಾರಿಯಲ್ಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದವರಿಗೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ

100% : ಹಸಿ–ಒಣ ಕಸ ವಿಂಗಡಣೆ. ನಗರದ ಪ್ರತಿ ಮನೆಯಿಂದ ಸಂಗ್ರಹಿಸಿದ ಕಸ ವಿಂಗಡಣೆಯಾಗಿರುತ್ತದೆ

ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ದಿನಕ್ಕೆ 2 ಬಾರಿ ಕಸ ಗುಡಿಸಲಾಗುತ್ತದೆ

100% : ನಗರದ ಎಲ್ಲಾ ಸಾರ್ವಜನಿಕ ಶೌಚಾಲಯಗಳ ಲೊಕೇಷನ್ ‘ಗೂಗಲ್ ಟಾಯ್ಲೆಟ್ ಲೊಕೇಟರ್‌’ನಲ್ಲಿ ಲಭ್ಯವಿದೆ

ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ‘ಸ್ವಚ್ಛತಾ ಸಮಿತಿ’ಗಳು ಇವೆ

ನಗರದ ಪ್ರಮುಖ ಸ್ಥಳಗಳ, ಸ್ಮಾರಕಗಳನ್ನು 15 ದಿನಗಳಿಗೊಮ್ಮೆ ತೊಳೆಯುವ ಅಭಿಯಾನ ಜಾರಿಯಲ್ಲಿದೆ. ನಗರಪಾಲಿಕೆಯ ಸದಸ್ಯರು, ಅಧಿಕಾರಿಗಳೂ ಈ ಅಭಿಯಾನದಲ್ಲಿ ಭಾಗವಹಿಸುತ್ತಾರೆ

 

ಮಂಗಳೂರು

5ನೇ ರ‍್ಯಾಂಕ್

ದೇಶದ ಬೇರೆಲ್ಲಾ ಮಧ್ಯಮ ನಗರಗಳಿಗೆ ಹೋಲಿಸಿದಲ್ಲಿ ಮಂಗಳೂರಿನಲ್ಲಿ ಘನತ್ಯಾಜ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ

6.23 ಲಕ್ಷ ಜನಸಂಖ್ಯೆ (2011ರ ಜನಗಣತಿ)

80% ರಷ್ಟು ಕಸವನ್ನು ಮನೆಗಳಲ್ಲೇ ವಿಂಗಡಣೆ ಮಾಡಲಾಗಿರುತ್ತದೆ

ನಗರದ ಬಹುತೇಕ ಎಲ್ಲೆಡೆ ಒಣ–ಕಸಿ ಕಸಕ್ಕೆ ಪ್ರತ್ಯೇಕ ಬುಟ್ಟಿಗಳನ್ನು ಇಡಲಾಗಿದೆ

85% ರಸ್ತೆಗಳು ಸ್ವಚ್ಛವಾಗಿವೆ

ಹುಣಸೂರು

4ನೇ ರ‍್ಯಾಂಕ್

ಪೂರ್ಣ ಪ್ರಮಾಣದಲ್ಲಿ ಕಸ ಸಂಗ್ರಹ, ತ್ಯಾಜ್ಯದಿಂದ ಗೊಬ್ಬರ ಮತ್ತು ಅನಿಲ ಉತ್ಪಾದಿಸುವ ಕಾರ್ಯಕ್ರಮಗಳಿಂದಾಗಿ ಹುಣಸೂರು ನಗರಸಭೆ ಈ ಪ್ರಶಸ್ತಿಗೆ ಭಾಜನವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ

51,000 ಜನಸಂಖ್ಯೆ (2011ರ ಜನಗಣತಿ)

12,971 ಮನೆಗಳು

27 ವಾರ್ಡ್‌ಗಳು

10 ಪ್ರತಿ ವಾರ್ಡ್‌ನಲ್ಲಿರುವ ಕಸ ಸಂಗ್ರಹಣ ತಳ್ಳುಗಾಡಿ

1 ಪ್ರತಿ ವಾರ್ಡ್‌ನಲ್ಲಿರುವ ಕಸ ಸಾಗಣೆ ಆಟೊ ಟಿಪ್ಪರ್

ಅಂದಿನ ಕಸವನ್ನು ಅಂದೇ ಸಂಸ್ಕರಣೆ ಮಾಡಲಾಗುತ್ತದೆ

ಹೋಟೆಲ್, ವಿದ್ಯಾರ್ಥಿನಿಲಯ, ಪೇಯಿಂಗ್‌ ಗೆಸ್ಟ್‌, ಕಲ್ಯಾಣ ಮಂಟಪಗಳು ಮತ್ತು ಮಾಂಸದ ಅಂಗಡಿಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತಿದೆ. ಇದನ್ನು ಸರ್ಕಾರಿ–ಖಾಸಗಿ ಸಹಭಾಗಿತ್ವ ಕಾರ್ಯಕ್ರಮದಡಿ ನಿರ್ವಹಿಸಲಾಗುತ್ತಿದೆ

ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಗೋಬರ್ ಗ್ಯಾಸ್‌ ಘಟಕವನ್ನು ನಿರ್ಮಿಸಲಾಗಿದೆ. ಹೋಟೆಲ್‌ಗಳ ತ್ಯಾಜ್ಯವನ್ನು ಬಳಸಿ ಇಲ್ಲಿ ಗೋಬರ್ ಗ್ಯಾಸ್‌ ಉತ್ಪಾದಿಸಲಾಗುತ್ತದೆ

 

ದೇಶದ ಅತ್ಯಂತ ಸ್ವಚ್ಛ ನಗರಗಳು

1. ಇಂದೋರ್

2. ಭೋಪಾಲ್‌

3. ಚಂಡೀಗಡ

 

ಸ್ವಚ್ಛತೆಯಲ್ಲಿ ರಾಜ್ಯಗಳ ರ‍್ಯಾಂಕ್

ಜಾರ್ಖಂಡ್ ಮೊದಲ ರ‍್ಯಾಂಕ್‌ನಲ್ಲಿದ್ದರೆ, ಮಹಾರಾಷ್ಟ್ರ ಮತ್ತು ಛತ್ತೀಸಗಡ ಕ್ರಮವಾಗಿ ಎರಡು ಮತ್ತು ಮೂರನೇ ರ‍್ಯಾಂಕ್ ಪಡೆದಿವೆ

ಆಧಾರ: ಸ್ವಚ್ಛ ಸರ್ವೇಕ್ಷಣೆ 2018ರ ವರದಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !