ಶಿಕ್ಷಕರ ದಿನಾಚರಣೆ: ದಾರಿ ತೋರಿದ ಗುರುಗಳ ಸ್ಮರಣೆ

7

ಶಿಕ್ಷಕರ ದಿನಾಚರಣೆ: ದಾರಿ ತೋರಿದ ಗುರುಗಳ ಸ್ಮರಣೆ

Published:
Updated:

ಬೆಂಗಳೂರು: ಯುವ ಮನಸ್ಸುಗಳಿಗೆ ಪ್ರೇರಣೆ ನೀಡಿ, ಸರಿಯಾದ ಮಾರ್ಗ ತೋರುವ ಮೂಲಕ ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶಿಕ್ಷಕರಿಗೆ ದೇಶದ ಗಣ್ಯರು ಗೌರವ ಸಲ್ಲಿಸಿದ್ದಾರೆ. ಜೀವನದಲ್ಲಿ ಎಂದಿಗೂ ಮರೆಯಲಾಗದ ಗುರುಗಳನ್ನು ನೆನಪಿಸಿಕೊಂಡು ನಮಿಸಿದ್ದಾರೆ. 

ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು 1962ರಿಂದ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಟ್ವೀಟ್‌ ಮಾಡಿ ನಮನ ಸಲ್ಲಿಸಿದ್ದಾರೆ. 

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಗುರುಗಳಾದ ಎಚ್‌.ನರಸಿಂಹಯ್ಯ ಅವರನ್ನು ಸ್ಮರಿಸಿ, ಒಳ್ಳೆಯ ಗುರು ಎಂದೆಂದಿಗೂ ಉನ್ನತಿಯ ದಾರಿ ದೀಪ ಎಂದಿದ್ದಾರೆ. 

‘ಶಿಕ್ಷಕರು ನಮ್ಮ ಗುರುಗಳು. ಗುರು–ಶಿಷ್ಯ ಪರಂಪರೆ ಜಗತ್ತಿಗೆ ಭಾರತ ನೀಡಿದ ಕೊಡುಗೆ,...’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !