ಮಂಗಳವಾರ, ಅಕ್ಟೋಬರ್ 15, 2019
28 °C
ಪಶ್ಚಿಮ ಬಂಗಾಳದ ಜಿಯಾಗಂಜ್‌ನಲ್ಲಿ ಬರ್ಬರ ಕೃತ್ಯ

ಒಂದೇ ಕುಟುಂಬದ ಮೂವರ ಕೊಲೆ

Published:
Updated:

ಮುರ್ಷಿದಾಬಾದ್: ‘ಜಿಯಾಗಂಜ್‌ನಲ್ಲಿ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು ಶಾಲಾ ಶಿಕ್ಷಕ ಗೋಪಾಲ್ ಪಾಲ್ (35), ಅವರ ಗರ್ಭಿಣಿ ಪತ್ನಿ ಬ್ಯೂಟಿ ಹಾಗೂ 8 ವರ್ಷದ ಪುತ್ರ ಅಂಗನ್ ಎಂದು ಗುರುತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ತನಿಖೆ ಆರಂಭಿಸಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮೇಲ್ನೋಟಕ್ಕೆ ಸೋಮವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಪಾಲ್‌ ಕುಟುಂಬದವರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ’ ಎಂದು ಹೇಳಿದ್ದಾರೆ.

‘ಮಂಗಳವಾರ ವಿಜಯದಶಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ ಕುಟುಂಬದವರು ಕಾಣಿಸದೆ ಇದ್ದಾಗ, ಸ್ಥಳೀಯರು ಅವರ ಮನೆಗೆ ತೆರಳಿದ್ದಾರೆ. ಮನೆ ಒಳಗಿನಿಂದ ಚಿಲಕ ಹಾಕಿದೆ ಎಂದು ತಿಳಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೂವರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 

Post Comments (+)