‘ಹನಿ ಟ್ರಾಪ್‌’ ಜಾಲ: ಇಬ್ಬರ ಬಂಧನ

ಶನಿವಾರ, ಏಪ್ರಿಲ್ 20, 2019
32 °C

‘ಹನಿ ಟ್ರಾಪ್‌’ ಜಾಲ: ಇಬ್ಬರ ಬಂಧನ

Published:
Updated:

ನವದೆಹಲಿ: ‘ಹನಿ ಟ್ರಾಪ್‌’ ಜಾಲದಲ್ಲಿ ಜನರನ್ನು ಸಿಲುಕಿಸಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ಒಬ್ಬ ಯುವಕ ಮತ್ತು ಮಹಿಳೆಯನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತಿಲಕ್‌ ನಗರದ ನಿವಾಸಿ ಪರ್ಮಿಂದರ್‌ ಸಿಂಗ್‌ ಈ ಜಾಲದ ಪ್ರಮುಖ ಬಂಧಿತ ಆರೋಪಿ ಎಂದು ಡಿಸಿಪಿ (ಪಶ್ಚಿಮ) ಮೋನಿಕಾ ಭಾರದ್ವಾಜ್‌ ತಿಳಿಸಿದ್ದಾರೆ.

ಸ್ವಲ್ಪ ವಯಸ್ಸಾದ ಶ್ರೀಮಂತರನ್ನೇ ಈ ಜಾಲ ‘ಹನಿ ಟ್ರಾಪ್‌’ಗೆ ಬೀಳಿಸುತ್ತಿತ್ತು. ಇತ್ತೀಚೆಗೆ ಈ ಕುರಿತು ಬಂದ ದೂರನ್ನು ಆಧರಿಸಿ ದಾಳಿ ನಡೆಸಿದ ಪೊಲೀಸರು, ಪರ್ಮಿಂದರ್‌ ಸಿಂಗ್‌ನನ್ನು ಹಣ ಪಡೆಯುವಾಗಲೇ ಬಂಧಿಸಿದ್ದಾರೆ. ಬಳಿಕ ಆತನ ಬಾಡಿಗೆ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ.

ತಪ್ಪು ಒಪ್ಪಿಕೊಂಡಿರುವ ಆರೋಪಿ, ತಿಂಗಳಲ್ಲಿ ಐವರನ್ನು ‘ಹನಿ ಟ್ರಾಪ್‌’ ಸಿಲುಕಿಸಿ ಅವರಿಂದ ಹಣ ಸುಲಿಗೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !