ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

7

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

Published:
Updated:

2017ರಲ್ಲಿ ತಮ್ಮ ಗುರುತು ಆಗಿದ್ದ ಕಪ್ಪು ಕನ್ನಡಕ್ಕೆ ಕರುಣಾನಿಧಿ ವಿದಾಯ ಹೇಳಿದ್ದರು. ಗಾಢ ಕಪ್ಪು ಕನ್ನಡಕ ಧರಿಸುತ್ತಿದ್ದ ಅವರು ಆನಂತರ ಟಿಂಟ್ ಇರುವ ಹಗುರ ಕನ್ನಡವನ್ನು ಧರಿಸತೊಡಗಿದರು. 46 ವರ್ಷಗಳ ಕಾಲ ತಮ್ಮ ಜೀವನದ ಅಂಗವಾಗಿಯೇ ಪರಿಗಣಿಸಲ್ಪಟ್ಟ ಕಪ್ಪು ಕನ್ನಡಕವನ್ನು ಬದಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಭಾರವಾದ  ಕಪ್ಪು ಕನ್ನಡಕ ಧರಿಸುವುದರಿಂದ ನೆತ್ತಿಗೆ ಅಧಿಕ ಒತ್ತಡವುಂಟಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಕನ್ನಡಕ ಬದಲಿಸಬೇಕಾಗಿ ಬಂದಿತ್ತು. ಹಾಗೆ 40 ದಿನಗಳ ಕಾಲ ಹೊಸ ಕನ್ನಡಕ್ಕಾಗಿ ಹುಡುಕಾಡಿ ಜರ್ಮನ್ ನಿರ್ಮಿತ ಹಗುರ ಕನ್ನಡಕ ಅವರಿಗೆ ಜತೆಯಾಯಿತು.

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು ಇಲ್ಲಿವೆ
* 1986 ಡಿಸೆಂಬರ್ 9 ರಂದು ಹಿಂದಿ ವಿರುದ್ಧ ಪ್ರತಿಭಟನೆ ನಡೆಸಿ ಸಂವಿಧಾನದ ಪುಟಗಳನ್ನು ಕರುಣಾನಿಧಿ ಸುಟ್ಟು ಹಾಕಿದ್ದರು. ಇದಕ್ಕಾಗಿ 10 ವಾರಗಳ ಕಾಲ ಜೈಲುವಾಸ ಅನುಭವಿಸಿದ್ದರು. 

*ಕರುಣಾನಿಧಿ ಅವರ ಅಪ್ಪ ಮುತ್ತುವೇಲರ್ ಅವರ ಮೂರನೇ ಹೆಂಡತಿಯ ಮಗನಾಗಿ ಜನನ. ಮುತ್ತುವೇಲರ್ ಅವರ ಮೊದಲ ಇಬ್ಬರು ಹೆಂಡತಿಯರು ಸಂತಾನ ಭಾಗ್ಯ ಇಲ್ಲದೆ ಮರಣ ಹೊಂದಿದ್ದರು.

*ಗಾಯಕನಾಗಿದ್ದ ಮುತ್ತುವೇಲರ್ ಅವರ ಪುತ್ರ ಸಂಗೀತ ಕಲಿಯಲು ಪ್ರಯತ್ನಿದ್ದರು. ಆದರೆ ಏಕಪಾತ್ರಾಭಿನಯ ಮತ್ತು ಬರವಣಿಗೆಯಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇತ್ತು.

*ತಿರುಕ್ಕವಳೈ ಗ್ರಾಮದ ದೇವಸ್ಥಾನದಲ್ಲಿ ಹರಕೆ ಹೊತ್ತು ಹುಟ್ಟಿದ ಮಗನಾಗಿದ್ದರಿಂದ ಕರುಣಾನಿಧಿ ಎಂಬ ಹೆಸರಿಡಲಾಗಿತ್ತು.

*ತಿರುವಾರೂರಿನಲ್ಲಿ ಶಾಲೆಯೊಂದರಲ್ಲಿ ದಾಖಲಾತಿ ನಿಷೇಧಿಸಿದಾಗ ಹತ್ತಿರದಲ್ಲಿದ್ದ  ಬಾವಿಗೆ ಹಾಕಿ ಆತ್ಮಹತ್ಯೆ ಮಾಡುತ್ತೇನೆ ಎಂದು ಹೆದರಿಸಿದ್ದರು. ಆಮೇಲೆ ಶಾಲೆಯಲ್ಲಿ ದಾಖಲು ಮಾಡಲಾಯಿತು.

*ದ್ರಾವಿಡ ಕಳಗಂ ಸಭೆ ಸೇರಿಸುವುದಕ್ಕಾಗಿ ಮನೆಯಿಂದ ಚಿನ್ನ ಕದ್ದು ಅದನ್ನು ಅಡವಿಟ್ಟು ಹಣ ಪಡೆದಿದ್ದರು ಎಂಬ ಕಥೆಯಿದೆ.

*ಗಾಂಧೀಜಿ ವಿರುದ್ಧ ಕರುಣಾನಿಧಿ ಬರೆದ ಲೇಖನ ಓದಿ ಸಿಟ್ಟಿಗೆದ್ದ ಗಾಂಧೀ ಅಭಿಮಾನಿಗಳು ಕರುಣಾನಿಧಿಯವರ ಸಭೆಯಲ್ಲಿ ದಾಂಧಲೆ ಸೃಷ್ಟಿಸಿ ಹಲ್ಲೆ ನಡೆಸಿದ್ದರು. ರಸ್ತೆ ಬದಿಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಕರುಣಾನಿಧಿ ಬದುಕಿದ್ದೇ ವಿಸ್ಮಯ ಎಂದು ಹೇಳುವವರಿದ್ದಾರೆ.

*ಕಾರು ಅಪಘಾತವೊಂದರಲ್ಲಿ ಕಣ್ಣಿಗೆ ತೀವ್ರ ಗಾಯಗೊಂಡ ಕರುಣಾನಿಧಿಗೆ 12 ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ದೃಷ್ಟಿ ಮರಳಿ ಸಿಕ್ಕಿತ್ತು. ಅಂದಿನಿಂದ ಅವರು ಕಪ್ಪು ಕನ್ನಡಕ ಧರಿಸ ತೊಡಗಿದ್ದರು.

*ಡಿಎಂಕೆ ಅಧ್ಯಕ್ಷನಾಗಿ 11 ಬಾರಿ ಆಯ್ಕಯಾಗಿದ್ದರು, 49 ವರ್ಷಗಳ ಕಾಲ ಪಕ್ಷವನ್ನು  ಮುನ್ನಡೆಸಿದ ಹೆಗ್ಗಳಿಕೆ ಇರುವುದು  ಕಲೈಂಗರ್ ಕರುಣಾನಿಧಿಗೆ ಮಾತ್ರ.

ಇದನ್ನೂ ಓದಿರಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಕರುಣಾನಿಧಿ ಬದುಕಿನ ಹಾದಿ

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !