ಪ್ರಚಾರ ಕೈಗೊಳ್ಳಲು ನರೇಂದ್ರ ಮೋದಿಗೆ ಎಲ್ಲಿಂದ ಹಣ ಬರುತ್ತಿದೆ: ರಾಹುಲ್ ಪ್ರಶ್ನೆ

ಶನಿವಾರ, ಏಪ್ರಿಲ್ 20, 2019
24 °C

ಪ್ರಚಾರ ಕೈಗೊಳ್ಳಲು ನರೇಂದ್ರ ಮೋದಿಗೆ ಎಲ್ಲಿಂದ ಹಣ ಬರುತ್ತಿದೆ: ರಾಹುಲ್ ಪ್ರಶ್ನೆ

Published:
Updated:

ಆಗ್ರಾ: ವಾಹಿನಿಗಳಲ್ಲಿ 30 ಸೆಕೆಂಡ್‌ ಜಾಹೀರಾತಿಗೆ ಲಕ್ಷಗಟ್ಟಲೆ ಪಾವತಿಸಬೇಕಿರುವಾಗ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಎಲ್ಲಿಂದ ಹಣ ಬರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಫತೇಪುರ್ ಸಿಕ್ರಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್, ‘ಎಲ್ಲಿ ನೋಡಿದರೂ ಮೋದಿ ಅವರ ಪ್ರಚಾರವೇ ಕಾಣುತ್ತಿದೆ. ಅವರಿಗೆ ಹಣ ಎಲ್ಲಿಂದ ಬರುತ್ತಿದೆ? ಪತ್ರಿಕೆಗಳಲ್ಲಿ ಜಾಹೀರಾತು ನೀಡಿಲು ಲಕ್ಷಾಂತರ ರೂಪಾಯಿ ಸುರಿಯಬೇಕು. ಮೋದಿ ಅವರೇನೂ ತಮ್ಮ ಜೇಬಿನಿಂದ ಹಣ ಖರ್ಚು ಮಾಡುತ್ತಿಲ್ಲ. ಹೀಗಿರುವಾಗ ಅವರಿಗೆ ಹಣ ನೀಡುತ್ತಿರುವವರು ಯಾರು’ ಎಂದು ರಾಹುಲ್ ಪ್ರಶ್ನಿಸಿದ್ದಾರೆ. 

‘ಮೋದಿ ಅವರು ಸಾರ್ವಜನಿಕರ ಹಣವನ್ನು ಕೊಳ್ಳೆಹೊಡೆದು ದೇಶಭ್ರಷ್ಟ ಉದ್ಯಮಿಗಳಿಗೆ ನೀಡಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !