ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸನಪುರ ಸಬ್‌ ರಿಜಿಸ್ಟ್ರಾರ್‌ ಕಚೇರಿ ಮೇಲೆ ಎಸಿಬಿ ದಾಳಿ: ₹5.69 ಲಕ್ಷ ನಗದು ವಶ

Last Updated 30 ಅಕ್ಟೋಬರ್ 2018, 3:21 IST
ಅಕ್ಷರ ಗಾತ್ರ

ಬೆಂಗಳೂರು:ದಾಸನಪುರ ಉಪ ನೋಂದಣಿ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ‌ದಳದ (ಎಸಿಬಿ) ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹ 5.69 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆಸ್ತಿ ನೋಂದಣಿ, ಋಣಭಾರ ಪತ್ರ ಖರೀದಿ ಮತ್ತು ದಾಖಲೆಗಳ ದೃಢೀಕೃತ ಪತ್ರಗಳನ್ನು ಪಡೆಯುವ ಸಲುವಾಗಿ ಬರುವ ಜನರಿಂದ ಉಪ ನೋಂದಣಿ ಅಧಿಕಾರಿ ಹಾಗೂ ಸಿಬ್ಬಂದಿ ಲಂಚ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಂಚದ ಹಣ ಸ್ವೀಕರಿಸಲು ಮಧ್ಯವರ್ತಿಗಳ ನೆರವು ಪಡೆಯಲಾಗುತಿತ್ತು. ಈ ಬಗ್ಗೆ ಬಂದ ದೂರು ಆಧರಿಸಿ ದಾಳಿ ನಡೆಸಲಾಗಿದೆ.

₹ 2000, 500 ಹಾಗೂ 100 ಸೇರಿದಂತೆ ವಿವಿಧ ಮುಖಬೆಲೆ ನೋಟುಗಳು ವಶಪಡಿಸಿಕೊಂಡ ಹಣದಲ್ಲಿ ಸೇರಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಎಸಿಬಿ ಕೇಂದ್ರ ವಿಭಾಗದ ಎಸ್ಪಿ ಎ.ಆರ್‌. ಬಡಿಗೇರ್‌ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT