₹ 100 ಕೋಟಿ ಸಾಲ ಕೊಟ್ಟಿರುವ ಅವಿನಾಶ್‌!

7
ಅನಧಿಕೃತವಾಗಿ ನೀಡಿರುವ ಸಾಲದ ಬಗ್ಗೆ ಐ.ಟಿ ತನಿಖೆ

₹ 100 ಕೋಟಿ ಸಾಲ ಕೊಟ್ಟಿರುವ ಅವಿನಾಶ್‌!

Published:
Updated:

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ (ಐ.ಟಿ) ಗಾಳಕ್ಕೆ ಸಿಕ್ಕಿರುವ ಕುಕ್ರೇಜ ಕುಟುಂಬದ ಸದಸ್ಯರು ವೈಯಕ್ತಿಕವಾಗಿ ಮತ್ತು ತಮ್ಮ ಕಂಪೆನಿಗಳ ಮೂಲಕ ವಿವಿಧ ರಿಯಲ್‌ ಎಸ್ಟೇಟ್‌ ಉದ್ಯಮಗಳಿಗೆ ಸುಮಾರು ₹ 100 ಕೋಟಿ ಸಾಲ ನೀಡಿದ್ದಾರೆ ಎನ್ನಲಾಗಿದೆ.

ಬೌರಿಂಗ್‌ ಕ್ಲಬ್‌ನ ಮೂರು ಲಾಕರ್‌ಗಳಲ್ಲಿ ಬಚ್ಚಿಟ್ಟಿದ್ದ ಭಾರಿ ಸಂಪತ್ತು ‍ಪತ್ತೆಯಾದ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕುಕ್ರೇಜ ಕುಟುಂಬದ ಸದಸ್ಯರ ಆದಾಯದ ಮೂಲಗಳನ್ನು ಜಾಲಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಅನಧಿಕೃತವಾಗಿ ನೀಡಿರುವ ಸಾಲಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

ಅವಿನಾಶ್‌ ಅಮರಲಾಲ್‌ ಕುಕ್ರೇಜ ಹಾಗೂ ಅವರ ತಂದೆ ಅಸರದಾಸ್‌ ಅಮರಲಾಲ್‌ ಕುಕ್ರೇಜ ಅವರ ಒಡೆತನದ ಅನುಷ್ಕಾ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿ. ರಿಯಲ್‌ ಎಸ್ಟೇಟ್‌ ಯೋಜನೆಗಳಿಗೆ ಸಾಲ ನೀಡುತ್ತಿದೆ. ತಂದೆ ಮತ್ತು ಮಗ 2004ರಲ್ಲಿ ಈ ಕಂಪೆನಿಗೆ ನಿರ್ದೇಶಕರಾಗಿ ಸೇರ್ಪಡೆಯಾಗಿದ್ದು, ಇಬ್ಬರೂ ತಲಾ ಶೇ 50ರಷ್ಟು ಷೇರುಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಕಳೆದ 14 ವರ್ಷಗಳಿಂದ ನಿರ್ಮಾಣ ಹಾಗೂ ಮೂಲ ಸೌಲಭ್ಯ ಯೋಜನೆಗಳಿಗೆ ಸಾಲ ನೀಡುತ್ತಿರುವ ಅನುಷ್ಕಾ ಕನ್‌ಸ್ಟ್ರಕ್ಷನ್‌ ₹ 50 ಕೋಟಿ ಸಾಲ ನೀಡಿದ್ದು, ಪ್ರತಿ ವರ್ಷ ₹ 5.5 ಕೋಟಿ
ರೂಪಾಯಿ ಬಡ್ಡಿ ಪಡೆಯುತ್ತಿದೆ. ಆದರ್ಶ ಡೆವಲಪರ್ಸ್‌, ಆದರ್ಶ ಸಿಟಿ ಸೆಂಟರ್‌ ಹೋಲ್ಡಿಂಗ್‌ ಪ್ರೈವೇಟ್‌ ಲಿ., ಇಟಿಎ ಸ್ಟಾರ್ ಇನ್‌ವೆಸ್ಟ್‌ಮೆಂಟ್ಸ್‌ ಅಂಡ್‌ ಪ್ರಾಪರ್ಟಿಸ್‌ ಪ್ರೈವೇಟ್‌ ಲಿ., ಈಸ್ಟ್‌ ಕೋಸ್ಟ್‌ ಕನ್‌ಸ್ಟ್ರಕ್ಷನ್ಸ್‌, ಇಟಿಎ ಸ್ಟಾರ್‌ ಪ್ರಾಪರ್ಟಿಸ್‌ ಡೆವಲಪರ್ಸ್‌, ಇಟಿಎ ಸ್ಟಾರ್‌ ಟೆಕ್‌ಸಿಟಿ ಪ್ರೈವೇಟ್‌ ಲಿ. ಒಳಗೊಂಡಂತೆ ಅನೇಕ ಕಂಪೆನಿಗಳಿಗೆ  ಸಾಲ ನೀಡಿದೆ.

ಇದಲ್ಲದೆ, ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ (ಎಲ್‌ಎಲ್‌ಪಿ) ಕಂಪೆನಿಗಳಿಂದಲೂ ಅವಿನಾಶ್‌ ಹಾಗೂ ಅವರ ಕುಟುಂಬದ ಸದಸ್ಯರು ₹ 50 ಕೋಟಿಯಷ್ಟು ಸಾಲ ನೀಡಿದ್ದಾರೆ. ಇದಲ್ಲದೆ, ವೈಯಕ್ತಿಕ ಸಾಮರ್ಥ್ಯದಲ್ಲೂ ಸಾಲ ನೀಡಲಾಗಿದೆ. ಅವಿನಾಶ್‌ (₹12. 21 ಕೋಟಿ), ಅಸರದಾಸ್‌ (₹12.7 ಕೋಟಿ), ಏಕತಾ ಅವಿನಾಶ್‌ (₹12.59ಕೋಟಿ), ಕಿರಣ್‌ ಅಮರಲಾಲ್‌ (₹ 12.34 ಕೋಟಿ) ಸಾಲ ಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !