ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ: ಸಚಿವ ಸಿ.ಎಸ್.ಪುಟ್ಟರಾಜು

7

ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ: ಸಚಿವ ಸಿ.ಎಸ್.ಪುಟ್ಟರಾಜು

Published:
Updated:

ಮಂಗಳೂರು: ‘ಮೈತ್ರಿ ಸರ್ಕಾರವನ್ನು ಐದು ವರ್ಷ ಯಾರೂ ಅಲುಗಾಡಿಸುವುದಕ್ಕೆ ಆಗಲ್ಲ. ಬಿಜೆಪಿ ಶಾಸಕರೂ ನಮ್ಮ ಜತೆ ಸಂಪರ್ಕದಲ್ಲಿದ್ದಾರೆ’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪ ಅವರು ಯಾಗದ ಮೊರೆ ಹೋಗಿದ್ದಾರೆ. ಯಡಿಯೂರಪ್ಪರ ಯಾವ ಪೂಜೆಯೂ ಫಲಿಸಲ್ಲ. ಅವರು ಇದೇ ರೀತಿ 5 ವರ್ಷ ತೀರ್ಥಯಾತ್ರೆ ಮಾಡಿಕೊಂಡೇ ಇರಬೇಕಾಗುತ್ತದೆ. ಕುಮಾರಸ್ವಾಮಿ ಅವರ ತೀರ್ಥಯಾತ್ರೆಯ ಫಲ ಸಿಗುತ್ತಿದೆ ಎಂದರು.

‘ಬಿಜೆಪಿಯವರ ನಡವಳಿಕೆ ನೋಡಿ ಯಾವ ಸಂದರ್ಭದಲ್ಲಿ ಫೀಲ್ಡ್‌ಗೆ ಇಳಿಸಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ -ಜೆಡಿಎಸ್ ಶಾಸಕರು ಯಾರೂ ಅವರ ಸಂಪರ್ಕದಲ್ಲಿಲ್ಲ. ಇದ್ದಿದ್ದರೆ ಈಗಾಗಲೇ ಶೋ ಮಾಡುತ್ತಿದ್ದರು. ಅದು ಆಗದೇ ಇರುವುದರಿಂದ ಯಡಿಯೂರಪ್ಪ ತೀರ್ಥಯಾತ್ರೆ ಮಾಡುತ್ತಿದ್ದಾರೆ’ ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !