ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನಗಳ ‘ಒನ್ ಪ್ಲಸ್ 6’

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಒನ್ ಪ್ಲಸ್ ಕಂಪನಿಯು ಹೊಸ ಗುಣವೈಶಿಷ್ಟ್ಯಗಳಿರುವ 'ಒನ್ ಪ್ಲಸ್ 6' ಫೋನ್ ಅನ್ನು ಗುರುವಾರ ಬಿಡುಗಡೆ ಮಾಡಿದೆ.

‘ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಬದಲಾವಣೆಗಳನ್ನು ತರಲಾಗಿದೆ. ಮೊಬೈಲ್ ಹಿಂಬದಿಗೂ ಗ್ಲಾಸ್ ಬಳಸಲಾಗಿದೆ. ಈ ಹಿಂದಿನ ಎಲ್ಲಾ ಫೋನ್‌ಗಳಲ್ಲಿ ಸೆರಾಮಿಕ್ ಬಳಸಲಾಗಿತ್ತು’ ಎಂದು ಕಂಪನಿಯ ಜಾಗತಿಕ ಮಾರುಕಟ್ಟೆಯ ಮುಖ್ಯಸ್ಥ ಕೈಲ್ ಕಿಯಾಂಗ್ ಅವರು ಇಲ್ಲಿ ನಡೆದ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.

6.28 ಇಂಚಿನ 19:9 ಅಮೋಲ್ಡ್ ಫುಲ್ ಆಪ್ಟಿಕ್ ಡಿಸ್‍ಪ್ಲೇ ಹೊಂದಿರುವ ಒನ್ ಪ್ಲಸ್ 6, ಒನ್ ಪ್ಲಸ್ ಬಿಡುಗಡೆ ಮಾಡಿರುವ ಫೋನ್‌ಗಳಲ್ಲಿಯೇ ಅತಿ ದೊಡ್ಡ ಸ್ಕ್ರೀನ್ ಹೊಂದಿರಲಿದೆ. ಅತ್ಯುತ್ತಮ ವೀಕ್ಷಣೆ ಅನುಭವವನ್ನು ನೀಡುತ್ತದೆ. ಒನ್‍ಪ್ಲಸ್ ಎಂಜಿನಿಯರಿಂಗ್‍ನಲ್ಲಿ, ಕ್ವಾಲ್ಕಂ ತಂತ್ರಜ್ಞಾನವನ್ನು ಹೊಂದಿರುವ ಒನ್‍ಪ್ಲಸ್ 6, ಕಂಪನಿಯು ಇದುವರೆಗಿನ ಮೊಬೈಲ್‌ಗಳಲ್ಲಿಯೇ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಇದೇ ವರ್ಷ 5 ಎಕ್ಸ್‌ಪೀರಿಯನ್ಸ್ ಮಳಿಗೆಗಳು, ಹಾಗೂ 10 ವಿಶೇಷ ಸೇವಾ ಕೇಂದ್ರಗಳನ್ನು ತೆಗೆಯಲು ಸಂಸ್ಥೆ ನಿರ್ಧರಿಸಿದೆ.

‘ಒನ್‍ಪ್ಲಸ್ 6 ಅನ್ನು ವಿಶೇಷವಾಗಿ ಅಮೆಜಾನ್ ಡಾಟ್‍ಇನ್‍ನಲ್ಲಿ ಬಿಡುಗಡೆ ಮಾಡಲು ನಮಗೆ ಹೆಚ್ಚು ಸಂತಸವಾಗುತ್ತಿದೆ. ಈ ಋತುವಿನ ಅತ್ಯಂತ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಇದೂ ಒಂದು ಎನ್ನುವುದರಲ್ಲಿ ಬೇರೆ ಮಾತಿಲ್ಲ. ಮೊಬೈಲ್ ಕ್ಷೇತ್ರದಲ್ಲೇ ಉತ್ತಮ ಗುಣವೈಶಿಷ್ಟ್ಯ ಮತ್ತು ವಿನ್ಯಾಸ ಹೊಂದಿರುವ ಈ ಮೊಬೈಲ್ ಎಲ್ಲ ಗ್ಯಾಜೆಟ್ ಪ್ರಿಯರಿಗೂ, ಕನಸಿನ ಸ್ಮಾರ್ಟ್ ಫೋನ್ ಆಗಲಿದೆ’ ಎಂದು ಅಮೆಜಾನ್ ಇಂಡಿಯಾದ ಮನಿಷ್ ತಿವಾರಿ ಹೇಳಿದರು.
*
21 ರಿಂದ ಲಭ್ಯ
ಆರಂಭಿಕ ಮಾರಾಟದಲ್ಲಿ ಅಮೆಜಾನ್‌ಡಾಟ್‌ಇನ್, ಒನ್ ಪ್ಲಸ್‌ಡಾಟ್‌ಇನ್ ಮತ್ತು ಒನ್‍ಪ್ಲಸ್ ಎಕ್ಸ್‌ಪೀರಿಯನ್ಸ್ ಮಳಿಗೆಗಳಲ್ಲಿ ಮೇ 21ರಂದು ಮಧ್ಯಾಹ್ನ 12 ಗಂಟೆಗೆ ಲಭ್ಯವಿರಲಿದೆ. ಮೇ 22ರಿಂದ ಎಲ್ಲೆಡೆ ಲಭ್ಯವಾಗಲಿದೆ.

ಬ್ಲೂಟೂತ್ ಇಯರ್ ಫೋನ್‌: ಕಂಪನಿಯು ಬ್ಲೂಟೂತ್ ಇಯರ್ ಫೋನ್ ಒನ್‍ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಬಿಡುಗಡೆ ಮಾಡಿದೆ. ಕೇವಲ 5 ನಿಮಿಷ ಚಾರ್ಜ್ ಮಾಡಿದರೆ, ನಿರಂತರವಾಗಿ 5 ಗಂಟೆಗಳವರೆಗೆ ಆಲಿಸಬಹುದು. ಇದರ ಬೆಲೆ ₹3,999. ಸದ್ಯದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ.

ಬಿಡುಗಡೆಯಾದ ಮೊದಲ ವಾರದಲ್ಲಿ ಗ್ರಾಹಕರು ಎಸ್‍ಬಿಐ ಡೆಬಿಟ್ ಮತ್ತು ಕ್ರೆಡಿಟ್‍ಕಾರ್ಡ್ ಮೂಲಕ ಖರೀದಿಸಿದರೆ, ₹2,000 ಕ್ಯಾಷ್‍ಬ್ಯಾಕ್ ಸೌಲಭ್ಯವಿರಲಿದೆ. ಅಷ್ಟೇ ಅಲ್ಲ, ಗ್ರಾಹಕರು ಎಲ್ಲ ಪ್ರಮುಖ ಬ್ಯಾಂಕುಗಳಿಂದ 3 ತಿಂಗಳವರೆಗಿನ ವೆಚ್ಚರಹಿತ ಇಎಂಐ ಸೌಲಭ್ಯವನ್ನು ಪಡೆಯಲೂ ಅರ್ಹರಾಗಿರುತ್ತಾರೆ.
*
ವೈಶಿಷ್ಟ್ಯ

ಪ್ರೊಸೆಸರ್: ಕ್ವಾಲ್ಕಂ ಸ್ನ್ಯಾಪ್‌ ಡ್ರ್ಯಾಗನ್ 845

ಕಾರ್ಯಾಚರಣೆ ವ್ಯವಸ್ಥೆ (ಒಎಸ್‌): ಆಕ್ಸಿಜನ್

ಕ್ಯಾಮೆರಾ: ಡ್ಯುಯೆಲ್ ಕ್ಯಾಮೆರಾ 16 ಮೆಗಾಪಿಕ್ಸಲ್ ಮೇನ್ ಕ್ಯಾಮೆರಾ, 20 ಮೆಗಾಪಿಕ್ಸಲ್ ಸೆಕೆಂಡರಿ ‌ ಕ್ಯಾಮೆರಾ

ರ‍್ಯಾಮ್: 6 ಜಿಬಿ ಮತ್ತು 8 ಜಿಬಿ

ಸ್ಟೋರೇಜ್:‌ 64 ಜಿಬಿ ಮತ್ತು 128 ಜಿಬಿ

ಡಿಸ್‌ಪ್ಲೇ: 6.28 ಇಂಚು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5

ಸಿಮ್‌: ಡ್ಯುಯೆಲ್ ನ್ಯಾನೊ

ಬ್ಯಾಟರಿ: 3,500 ಎಂಎಎಚ್

ಬೆಲೆ: 6 ಜಿ.ಬಿ ರ‍್ಯಾಮ್ 64 ಜಿ.ಬಿ ಸ್ಟೋರೇಜ್ ₹34,999,

8 ಜಿ.ಬಿ ರ‍್ಯಾಮ್ 128 ಜಿ.ಬಿ ಸ್ಟೊರೇಜ್ ₹39,999

(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ಮುಂಬೈಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT