ಮೋದಿ ಸೂಟ್‌ಕೇಸ್‌: ತನಿಖೆಗೆ ಕಾಂಗ್ರೆಸ್ ಒತ್ತಾಯ, ಜಿಲ್ಲಾ ಚುನಾವಣಾಧಿಕಾರಿಗೆ ದೂರು

ಗುರುವಾರ , ಏಪ್ರಿಲ್ 25, 2019
31 °C

ಮೋದಿ ಸೂಟ್‌ಕೇಸ್‌: ತನಿಖೆಗೆ ಕಾಂಗ್ರೆಸ್ ಒತ್ತಾಯ, ಜಿಲ್ಲಾ ಚುನಾವಣಾಧಿಕಾರಿಗೆ ದೂರು

Published:
Updated:

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಂದಿದ್ದ ಸೂಟ್‌ಕೇಸ್‌ನಲ್ಲಿ ಹಣ ರವಾನೆ ಆಗಿರುವ ಅನುಮಾನವಿದ್ದು, ತನಿಖೆಗೆ ಆದೇಶಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗೆ ಕಾಂಗ್ರೆಸ್‌ ದೂರು ನೀಡಿದೆ.

ಹೆಲಿಕಾಪ್ಟರ್‌ನಿಂದ ಕೆಳಗೆ ಇಳಿಸಿದ ಸೂಟ್‌ಕೇಸಿನಲ್ಲಿ ಏನಿತ್ತು ಎಂಬ ಪ್ರಶ್ನೆ ಉದ್ಭವಿಸಿದೆ. ಅದನ್ನು ತರಾತುರಿಯಲ್ಲಿ ಕಾರಿಗೆ ಹಾಕುವ ಉದ್ದೇಶ ಏನಿತ್ತು ಎಂಬುದು ಬಹಿರಂಗವಾಗಬೇಕಿದೆ. ಕಾರು ಯಾರಿಗೆ ಸೇರಿದ್ದು, ಪೆಟ್ಟಿಗೆಯನ್ನು ಎಲ್ಲಿಗೆ ಕೊಂಡೊಯ್ಯಲಾಯಿತು ಎಂಬುದರ ಬಗ್ಗೆ ಕೂಲಂಕಶ ತನಿಖೆ ನಡೆಯಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ಸಿ.ಶಿವುಯಾದವ್ ಒತ್ತಾಯಿಸಿದರು.

ಬೇರೆ ರಾಜ್ಯಗಳಲ್ಲಿ ನಡೆಸಿದ ರ‍್ಯಾಲಿಗೆ ನರೇಂದ್ರ ಮೋದಿ ಅವರ ಬೆಂಗಾವಲಿಗೆ ನಿಯೋಜನೆಗೊಂಡಿದ್ದ ವಾಹನಗಳಲ್ಲಿ ಹಣ ಸಿಕ್ಕಿರುವ ಬಗ್ಗೆ ವರದಿಯಾಗಿದೆ. ಚಿತ್ರದುರ್ಗಕ್ಕೂ ಹೀಗೆ ಹಣ ರವಾನೆ ಆಗಿರುವ ಸಂಶಯವಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಏ.9ರಂದು ನಡೆದ ನರೇಂದ್ರ ಮೋದಿ ಅವರನ್ನು ಕರೆತಂದಿದ್ದ ಹೆಲಿಕಾಪ್ಟರ್‌ನಿಂದ ಸೂಟ್‌ಕೇಸ್‌ವೊಂದನ್ನು ಇಳಿಸಿ, ತರಾತುರಿಯಲ್ಲಿ ಸಾಗಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !