ಉಪ್ಪುಂಡ ಮನೆಗೆ ದ್ರೋಹ ಮಾಡಲ್ಲ: ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ

7

ಉಪ್ಪುಂಡ ಮನೆಗೆ ದ್ರೋಹ ಮಾಡಲ್ಲ: ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ

Published:
Updated:
Deccan Herald

ಹುಬ್ಬಳ್ಳಿ:‘ದಕ್ಷಿಣ ಕರ್ನಾಟಕದ ಬಿಜೆಪಿ ಮುಖಂಡರೊಬ್ಬರು ಪಕ್ಷಕ್ಕೆ ಬರುವಂತೆ ನನಗೆ ಆಹ್ವಾನಿಸಿದ್ದರು. ಆದರೆ, ಕಾಂಗ್ರೆಸ್‌ ಪಕ್ಷ ನನಗೆ ತಾಯಿ ಇದ್ದಂತೆ. ಉಪ್ಪುಂಡ ಮನೆಗೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಸ್ಪಷ್ಟಪಡಿಸಿದರು.

‘ಒಂದು ತಿಂಗಳಿಂದಲೂ ನನ್ನನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಆದರೆ, ನನಗೆ ಪಕ್ಷ ಬಿಡುವ ಯೋಚನೆ ಇಲ್ಲ ಎಂದು ಹೇಳಿದ್ದೇನೆ. ಗುರುವಾರದವರೆಗೂ ಆ ಮುಖಂಡರು ನನಗೆ ಫೋನ್‌ ಮೂಲಕ ಒತ್ತಡ ಹೇರುತ್ತಿದ್ದರು. ಕಾಂಗ್ರೆಸ್‌ ನನಗೆ ಅಧಿಕಾರವನ್ನು ಕೊಟ್ಟಿದೆ. ನಾನು ಇರುವವರೆಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಆದರೆ, ಅವರು ತಮ್ಮನ್ನು ಸಂಪರ್ಕಿಸಿದ ಬಿಜೆಪಿ ಮುಖಂಡರು ಯಾರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.

‘ನಾನು ಬಿಜೆಪಿ ಸೇರಿದರೆ ಸಚಿವ ಸ್ಥಾನ ಅಥವಾ ಇನ್ನಾವುದೋ ಮಹತ್ವದ ಸ್ಥಾನ ಸಿಗಬಹುದು. ಆದರೆ, ಅಧಿಕಾರದ ಬೆನ್ನ ಹಿಂದೆ ಹೋದರೆ ಜನರು ನನ್ನ ಮೇಲಿಟ್ಟ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೇ, ಮತ್ತೊಮ್ಮೆ ಚುನಾವಣೆ ಎದುರಿಸುವುದೂ ಮುಜುಗರದ ವಿಚಾರ. ನನ್ನನ್ನು ಆಯ್ಕೆ ಮಾಡಿದ ಜನಗಳಿಗೆ ಮೋಸ ಮಾಡಲಾರೆ’ ಎಂದು ಅವರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !