ಕಡವೆ ಮಾಂಸ ವಶ

7
ತಮಿಳುನಾಡಿನ ಬೇಟೆಗಾರರ ಕೃತ್ಯದ ಶಂಕೆ

ಕಡವೆ ಮಾಂಸ ವಶ

Published:
Updated:
Deccan Herald

ಹನೂರು: ಕಾವೇರಿ ವನ್ಯಧಾಮದಲ್ಲಿ ಮಾರಾಟಕ್ಕೆ ಸಿದ್ಧಪಡಿಸಿಟ್ಟಿದ್ದ ಕಡವೆ ಮಾಂಸವನ್ನು ಅರಣ್ಯಾಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.

ಕೌದಳ್ಳಿ ವನ್ಯಜೀವಿ ವಲಯದ ದಂಟಳ್ಳಿ ಬಳಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗೆ ಮಾಂಸ ಒಣಗಿಸಿಟ್ಟಿರುವುದು ಕಂಡು ಬಂದಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ಪರಿಶೀಲನೆ ನಡೆಸಿ 30 ಕೆ.ಜಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

‘ಬೇಟೆಗಾರರು ತಮಿಳುನಾಡಿನವರಾಗಿದ್ದು, ಕಾವೇರಿ ನದಿಯನ್ನು ದಾಟಿ ಅರಣ್ಯಕ್ಕೆ ನುಗ್ಗಿ ಕಡವೆ ಬೇಟೆಯಾಡಿ ಮಾರಾಟಕ್ಕೆ ಯತ್ನಿಸಿದ್ದಾರೆ. ಸಿಬ್ಬಂದಿ ಗಸ್ತು ತಿರುಗುವುದನ್ನು ಗಮನಿಸಿ, ಮಾಂಸವನ್ನು ಅಲ್ಲೇ ಬಿಟ್ಟು ಪರಾರಿಯಾಗಿರಬಹುದು’ ಎಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !