ಅರಣ್ಯ ಸಚಿವರು ನಡೆಸಿದ ಸಭೆಗೆ ಬಂದ ಪತ್ನಿ, ಪುತ್ರ

7

ಅರಣ್ಯ ಸಚಿವರು ನಡೆಸಿದ ಸಭೆಗೆ ಬಂದ ಪತ್ನಿ, ಪುತ್ರ

Published:
Updated:
ಸರ್ಕಾರಿ ಕಾರಿನಲ್ಲಿ ಅರಣ್ಯ ಸಚಿವ ಆರ್‌.ಶಂಕರ್‌ ಅವರ ಪತ್ನಿ ಹಾಗೂ ಪುತ್ರ ಮಡಿಕೇರಿಯ ಐಬಿಯಿಂದ ತೆರಳಿದರು

ಮಡಿಕೇರಿ: ಇಲ್ಲಿನ ಅರಣ್ಯ ಇಲಾಖೆಯ ಐ.ಬಿಯಲ್ಲಿ ಅರಣ್ಯ ಸಚಿವ ಆರ್‌.ಶಂಕರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಅವರ ಪತ್ನಿ, ಪುತ್ರ ಹಾಗೂ ಕುಟುಂಬಸ್ಥರು ಕಾಣಿಸಿಕೊಂಡರು.

ನಗರದಲ್ಲಿ ಮಧ್ಯಾಹ್ನ 2.30ಕ್ಕೆ ಆನೆ– ಮಾನವ ಸಂಘರ್ಷ ಕುರಿತು ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದ ಸಚಿವರು, ಮಡಿಕೇರಿಗೆ 5 ಗಂಟೆಗೆ ಬಂದರು. ಸಭೆ ನಿಗದಿಯಾಗಿದ್ದ ಅರಣ್ಯ ಭವನಕ್ಕೂ ಬಾರದೆ ಐಬಿಗೆ ಅಧಿಕಾರಿಗಳನ್ನು ಕರೆಸಿಕೊಂಡು ರಹಸ್ಯ ಸಭೆ ನಡೆಸಿದರು. ರೈತರು ಮಾತ್ರ ಅರಣ್ಯ ಭವನದ ಬಳಿ ಸಚಿವರಿಗಾಗಿ ಕಾದು ಕುಳಿತಿದ್ದರು.ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ಕುಮಾರ್ ಮಿಶ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಉಪಸ್ಥಿತರಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆಯುವಾಗಲೂ ಕುಟುಂಬಸ್ಥರು ಹಾಗೂ ಆಪ್ತರು ಹಾಜರಿದ್ದರು.

ಸಚಿವರು ಹೊರಡುವಾಗ ಕಾರಿನಲ್ಲಿ ಕುಳಿತಿದ್ದ ಅವರ ಪತ್ನಿ, ಜಿಲ್ಲಾಧಿಕಾರಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಕಂಡುಬಂತು. ರೈತರ ಆಕ್ರೋಶಕ್ಕೆ ತುತ್ತಾಗುವ ಭಯದಿಂದ ಕೊನೆಯಲ್ಲಿ ಅರಣ್ಯ ಭವನಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !