ಶುಕ್ರವಾರ, ಡಿಸೆಂಬರ್ 6, 2019
19 °C

ನಿತ್ಯಾನಂದನಿಗಾಗಿ ಬಿಡದಿಯಲ್ಲಿ ಗುಜರಾತ್‌ ಪೊಲೀಸರ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿಯನ್ನು ಹುಡುಕಿ ಗುಜರಾತ್‌ ಪೊಲೀಸರು ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿ ಶೋಧ ನಡೆಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗುಜರಾತ್‌ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ನಿತ್ಯಾನಂದ ವಿರುದ್ಧ ಸರ್ಚ್‌ ವಾರಂಟ್‌ ಹೊರಡಿಸಿದ್ದು ಅದರೊಂದಿಗೆ ಪೊಲೀಸರು ಶುಕ್ರವಾರ ಆಶ್ರಮ ಪ್ರವೇಶಿಸಿದರು. ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಶನಿವಾರವೂ ಆಶ್ರಮದಲ್ಲಿ ಹುಡುಕಾಟ ನಡೆಸಿದರು. ಆದರೆ ಎಲ್ಲಿಯೂ ನಿತ್ಯಾನಂದನ ಸುಳಿವು ಪತ್ತೆ ಆಗಲಿಲ್ಲ. ನಿತ್ಯಾನಂದನನ್ನು ಹುಡುಕಿ ರಾಜ್ಯ ಸಿಐಡಿ ಪೊಲೀಸರು ಕಳೆದ ವಾರ ಆಶ್ರಮಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು