ಗುಡ್ಡ ಕುಸಿದು ಮುಡಿಪು–ಮೆಲ್ಕಾರ್‌ ಹೆದ್ದಾರಿ ಬಂದ್

7
ದ.ಕ.ಜಿಲ್ಲೆಯಲ್ಲಿ ಧಾರಾಕಾರ ಮಳೆ–ಹಲವೆಡೆ ಹಾನಿ

ಗುಡ್ಡ ಕುಸಿದು ಮುಡಿಪು–ಮೆಲ್ಕಾರ್‌ ಹೆದ್ದಾರಿ ಬಂದ್

Published:
Updated:
ಮುಡಿಪು ಸಮೀಪದ ಮಿತ್ತಕೋಡಿಯಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದಿರುವುದು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದೆ. ಬಂಟ್ವಾಳ ತಾಲ್ಲೂಕಿನ ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಕೋಡಿ ಅಮೃತಕಲ್ಪ ಎಂಬಲ್ಲಿ ಮುಡಿಪು-ಮೆಲ್ಕಾರ್ ಮುಖ್ಯರಸ್ತೆ ಮೇಲೆ ಗುಡ್ಡ ಕುಸಿದು ಮಂಗಳವಾರ ಸಂಜೆಯವರೆಗೂ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು.

ಸೋಮವಾರ ಮಧ್ಯರಾತ್ರಿ 1.30ರ ಸುಮಾರಿಗೆ ಗುಡ್ಡ ಕುಸಿದಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಮಣ್ಣಿನ ತೆರವು ಕಾರ್ಯಾಚರಣೆ ನಡೆಯಿತು. ವಾಮಂಜೂರಿನ ಬಳಿ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ಆತಂಕ ಉಂಟು ಮಾಡಿದೆ.

ತೂಗು ಸೇತುವೆಯಲ್ಲಿ ಸಂಚಾರ: ಮೂಲಾರಪಟ್ಣ ಸೇತುವೆ ಕುಸಿತಗೊಂಡಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೂಗು ಸೇತುವೆಯನ್ನು ಮುಕ್ತ ಮಾಡಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ತೂಗು ಸೇತುವೆಯ ಎರಡೂ ಬದಿಗಳಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲಿಂದ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಸರಾಸರಿ 82 ಮಿ.ಮೀ. ಮಳೆ ಸುರಿದಿದ್ದು, ಬಂಟ್ವಾಳ ತಾಲ್ಲೂಕಿನಲ್ಲಿ ಗರಿಷ್ಠ 104.3 ಮಿ.ಮೀ. ಮಂಗಳೂರು ತಾಲ್ಲೂಕಿನಲ್ಲಿ 97.6 ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ 87.7 ಮಿ.ಮೀ. ಮಳೆಯಾಗಿದೆ.

ಉತ್ತಮ ಮಳೆ: ಬೆಳಗಾವಿ ಸುತ್ತಮುತ್ತ ಹಾಗೂ ಖಾನಾಪುರದಲ್ಲಿ ಮಂಗಳವಾರ ದಿನವಿಡೀ ಉತ್ತಮ ಮಳೆಯಾಗಿದೆ. ಕಿತ್ತೂರು, ನಿಪ್ಪಾಣಿ, ಹಿರೇಬಾಗೇವಾಡಿಯಲ್ಲಿ ಅಂದಾಜು ಒಂದೂವರೆ ತಾಸು ಸಾಧಾರಣ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !