ಪೆಂಚನಪಳ್ಳಿಯಲ್ಲಿ ಬಸ್‌ ನಿಲುಗಡೆ ಸಂಭ್ರಮಿಸಿದ ವಿದ್ಯಾರ್ಥಿನಿಯರು

7

ಪೆಂಚನಪಳ್ಳಿಯಲ್ಲಿ ಬಸ್‌ ನಿಲುಗಡೆ ಸಂಭ್ರಮಿಸಿದ ವಿದ್ಯಾರ್ಥಿನಿಯರು

Published:
Updated:

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಸುಲೇಪೇಟೆ ಸರ್ಕಾರಿ ಕನ್ಯಾ ಪ್ರೌಢಶಾಲೆ ವಿದ್ಯಾರ್ಥಿನಿಯರ ‘ಗಾಂಧಿಗಿರಿ’ಗೆ ಸ್ಪಂದಿಸಿರುವ ಚಿಂಚೋಳಿ ಡಿಪೋ ವ್ಯವಸ್ಥಾಪಕರು ಎಲ್ಲ ಬಸ್‌ಗಳಿಗೂ ಪೆಂಚನಪಳ್ಳಿಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿನಿಯರು ಶುಕ್ರವಾರ ಬಸ್‌ನಲ್ಲೇ ಶಾಲೆಗೆ ಬಂದರು.

ಸುಲೇಪೇಟೆಯಿಂದ 12 ಕಿಲೊ ಮೀಟರ್‌ ದೂರದ ಚಿಂಚೋಳಿಗೆ ನಡೆದ ಪರಿಣಾಮ 5 ವಿದ್ಯಾರ್ಥಿನಿಯರಿಗೆ ಕಾಲುನೋವು ಉಂಟಾಗಿದ್ದು, ಅವರು ಶಾಲೆಗೆ ಗೈರಾಗಿದ್ದರು. ಬಸ್ ನಿಲುಗಡೆ ಮಾಡದಿದ್ದರೆ ತಮ್ಮ ಮೊಬೈಲ್‌ಗೆ ಕರೆ ಮಾಡಿ ದೂರು ನೀಡುವಂತೆ ಡಿಪೋ ವ್ಯವಸ್ಥಾಪಕರು ಹೇಳಿರುವುದರಿಂದ ವಿದ್ಯಾರ್ಥಿನಿಯರು ಖುಷಿಯಾಗಿದ್ದಾರೆ.

ಬಸ್ ನಿಲುಗಡೆ ಮಾಡುವಂತೆ ಡಿಪೋ ವ್ಯವಸ್ಥಾಪಕರನ್ನು ಒತ್ತಾಯಿಸಲು 14 ಬಾಲಕಿಯರು ಗುರುವಾರ 12 ಕಿಲೊ ಮೀಟರ್‌ ನಡೆದುಕೊಂಡು ಚಿಂಚೋಳಿಗೆ ಹೋಗಿದ್ದರು. ಈ ಕುರಿತು ‘ಪ್ರಜಾವಾಣಿ’ ಶುಕ್ರವಾರ ವರದಿ ಪ್ರಕಟಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !