ಲಾರಿಯಲ್ಲಿದ್ದ ಯಂತ್ರದ ಬಿಡಿಭಾಗ ಬಸ್‌ಗೆ ಬಡಿದು ಇಬ್ಬರ ಸಾವು

7

ಲಾರಿಯಲ್ಲಿದ್ದ ಯಂತ್ರದ ಬಿಡಿಭಾಗ ಬಸ್‌ಗೆ ಬಡಿದು ಇಬ್ಬರ ಸಾವು

Published:
Updated:

ಕುಮಟಾ (ಉತ್ತರ ಕನ್ನಡ): ತೆರೆದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಕಬ್ಬಿಣದ ಯಂತ್ರವೊಂದರ ಬೃಹತ್ ಬಿಡಿಭಾಗವು, ಶನಿವಾರ ಎನ್‌ಡಬ್ಲುಕೆಆರ್‌ಟಿಸಿ ಬಸ್‌ಗೆ ಬಡಿದಿದ್ದು, ಪ್ರಯಾಣಿಕರಿಬ್ಬರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹೊಸಕಟ್ಟಾದ ಶಶಿಕಲಾ ಹರಿಕಂತ್ರ (60) ಹಾಗೂ ಗೊನೆಹಳ್ಳಿಯ ವೆಂಕಟೇಶ ಗಣಪತಿ ಗುನಗಾ (40) ಮೃತಪಟ್ಟವರು.

ಬಸ್ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಡುಪಿ, ಮಣಿಪಾಲ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಯಂತ್ರದ ಬಿಡಿಭಾಗವು ಲಾರಿಯಿಂದ ಸುಮಾರು ನಾಲ್ಕು ಅಡಿ ಹೊರಗೆ ಚಾಚಿಕೊಂಡಿತ್ತು. ಪಟ್ಟಣದ ರಾಮಲೀಲಾ ಆಸ್ಪತ್ರೆಯ ಬಳಿ ಬರುತ್ತಿದ್ದ ಬಸ್‌ಗೆ ಬಡಿದಿದೆ. ಆ ರಭಸಕ್ಕೆ ಬಸ್‌ನ ಬಲಭಾಗ ಸಂಪೂರ್ಣ ಕಿತ್ತುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !