ಮಹಾದಾಯಿ ತೀರ್ಪು: ನವಲಗುಂದದಲ್ಲಿ ಹೈ ಅಲರ್ಟ್‌

7

ಮಹಾದಾಯಿ ತೀರ್ಪು: ನವಲಗುಂದದಲ್ಲಿ ಹೈ ಅಲರ್ಟ್‌

Published:
Updated:

ನವಲಗುಂದ: ಮಹಾದಾಯಿ ನೀರು ಹಂಚಿಕೆ ಕುರಿತಂತೆ ಇಂದು ಮಹದಾಯಿ ನ್ಯಾಯಮಂಡಳಿ ತೀರ್ಪು ಪ್ರಕಟವಾಗಲಿದ್ದು, ನವಲಗುಂದದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಇಂದಿಗೆ ನವಲಗುಂದ ಹೋರಾಟ 1118 ನೇ ದಿನಕ್ಕೆ ಕಾಲಿಟ್ಟಿದೆ. 2015ರ ಮಾರ್ಚ್‌ 5ರಿಂದ ಹೋರಾಟ ಪ್ರಾರಂಭ ವಾಗಿತ್ತು. 

ನೂರಾರು ರೈತರು ಹೊರಾಟದ ವೇದಿಕೆ ಬಳಿ ಜಮಾಯಿಸುತ್ತಿದ್ದು, ಕಾತುರದಿಂದ ತೀರ್ಪು ಕಾಯುತ್ತಿದ್ದಾರೆ. ಇದು ನಾಲ್ಕು ಜಿಲ್ಲೆ(ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟ) 11 ತಾಲ್ಲೂಕಿನ ರೈತರ ದಶಕಗಳ ಕನಸು.

ಹೋರಾಟ ಸಂಬಂಧ ಒಟ್ಟು 56 ಪ್ರಕರಣಗಳು. ಅದರಲ್ಲಿ 49 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಬಾಕಿ ಉಳಿದ 7 ಪ್ರಕರಣಗಳು ಇತ್ತಿಚೆಗೆ ಹಾಕಲಾಗಿತ್ತು. ಇವಿಷ್ಟೇ ಅಲ್ಲದೆ ಹುಬ್ಬಳ್ಳಿ 1, ಅಮ್ಮಿನಭಾವಿ 1, ಗದಗ 3, ನರಗುಂದ 2 ಪ್ರಕರಣಗಳು ಬಾಕಿ ಉಳಿದಿವೆ.

187 ರೈತರು ಬಳ್ಳಾರಿ ಮತ್ತು ಚಿತ್ರದುರ್ಗ ಜೈಲಿಗೆ ಹೊಗಿ ಬಂದಿದ್ದಾರೆ. 2016ರ ಜುಲೈ 27ರಂದು ಜೈಲಿಗೆ ಹೋಗಿದ್ದು, 2016ರ ಆಗಸ್ಟ್‌ 13ರಂದು ಬಿಡುಗಡೆಯಾಗಿದ್ದರು.

ನವಲಗುಂದದಲ್ಲಿ ಮುನ್ನೆಚ್ಚರಿಕೆಯಾಗಿ ಹೆಚ್ಚು ಪೊಲೀಸರನ್ನು ಹಾಕದಿರುವುದರಿಂದ ತೀರ್ಪು ನಮ್ಮ ಪರವಾಗಿದೆ ಎಂಬುದು ರೈತರ ಲೆಕ್ಕಾಚಾರ.

ನ್ಯಾಯಮೂರ್ತಿ ಜೆ.ಎಸ್.ಪಾಂಚಾಲ್ ನೇತೃತ್ವದ ನ್ಯಾಯಮಂಡಳಿಯಿಂದ ತೀರ್ಪು ಹೊರಬೀಳಲಿದೆ. ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಅಹವಾಲು ಆಲಿಸಿ ವಿಚಾರಣೆ ನಡೆಸಿತ್ತು. ಇದರ ಐತೀರ್ಪುನ್ನು ಕಾಯ್ದಿರಿಸಲಾಗಿತ್ತು.

ನರಗುಂದ-ನವಲಗುಂದ ಕಡೆ ಬಸ್ ಸಂಚಾರ ಸ್ಥಗಿತ
ಹುಬ್ಬಳ್ಳಿ:
ಮಹದಾಯಿ ನ್ಯಾಯಮಂಡಳಿಯು ಅಂತಿಮ ತೀರ್ಪು ಪ್ರಕಟಿಸುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಗರದಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಈ ಕುರಿತು ಪ್ರಜಾವಾಣಿಗೆ ಮಾಹಿತಿ ನೀಡಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ‌ವಿಶ್ವಜ್ಣ, ಪೊಲೀಸರ ಸೂಚನೆ ಮೇರೆಗೆ ನವಲಗುಂದ-ನರಗುಂದ ಮೂಲಕ ಹಾಯ್ದು ಹೋಗುವ ವಿಜಯಪುರ, ಬಾಗಲಕೋಟೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನರಗುಂದದಲ್ಲಿ ವಾತಾವರಣ ಬಿಗುವಿನಿಂದ ಕೂಡಿರುವ ಮಾಹಿತಿ ಇದ್ದು ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.

ಅಂತರರಾಜ್ಯ ಬಸ್ ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ ಎಂದರು.

* ಇದನ್ನೂ ಓದಿ...

ಸಂಜೆ 4 ಗಂಟೆಗೆ ಮಹದಾಯಿ ನ್ಯಾಯಮಂಡಳಿ ತೀರ್ಪು 

* ‘ನೀರು ಕೊಡಿ, ಇಲ್ಲವೇ ದಯಾ ಮರಣ ನೀಡಿ’ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !