ಮಾನವ ಹಕ್ಕು ಉಲ್ಲಂಘನೆ: ರಾಜ್ಯಕ್ಕೆ ನೋಟಿಸ್‌

7

ಮಾನವ ಹಕ್ಕು ಉಲ್ಲಂಘನೆ: ರಾಜ್ಯಕ್ಕೆ ನೋಟಿಸ್‌

Published:
Updated:

ಬೆಂಗಳೂರು: ‘ಮಾನವ ಹಕ್ಕು ಉಲ್ಲಂಘನೆಯ ಏಳು ಪ್ರಕರಣಗಳಲ್ಲಿ ಸಮರ್ಪಕವಾಗಿ ಹಣಕಾಸಿನ ನೆರವು ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ’ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ನ್ಯಾ.ಎಚ್‌.ಎಲ್‌.ದತ್ತು ತಿಳಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಎರಡು ದಿನ ಬಹಿರಂಗ ವಿಚಾರಣೆ ನಡೆಸಲಾಗಿದ್ದು, ಮೊದಲ ದಿನ 185 ಪ್ರಕರಣಗಳ ವಿಚಾರಣೆ ನಡೆಸಿ 106 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ದಲಿತರ ಮೇಲಿನ ದೌರ್ಜನ್ಯ, ಪೊಲೀಸ್‌ ದೌರ್ಜನ್ಯ, ಭೂಸ್ವಾಧೀನದ ವೇಳೆ ಪರಿಹಾರ ವಿತರಿಸಿಲ್ಲ ಎಂಬ ವಿಷಯಗಳ ಬಗ್ಗೆಯೇ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರಿನಲ್ಲಿ ಕಲುಷಿತ ನೀರು ಕುಡಿದು ನಾಲ್ವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪ್ರತಿ ಕುಟುಂಬಕ್ಕೆ ತಲಾ ₹2 ಲಕ್ಷ ವಿತರಿಸಲು ನಿರ್ದೇಶನ ನೀಡಲಾಗಿದೆ’ ಎಂದರು.

‘ಅನೇಕ ಮಂದಿ ವಾಹನಗಳ ಮೇಲೆ ‘ಮಾನವ ಹಕ್ಕು ಸಂಘಟನೆ’ ಎಂದು ಫಲಕ ಹಾಕಿಕೊಂಡಿರುತ್ತಾರೆ. ಅನೇಕ ಲೆಟರ್‌ಹೆಡ್‌ ಸಂಘಟನೆಗಳು ಇವೆ. ಇವುಗಳ ವಿರುದ್ಧ ಆಯೋಗ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸಾರ್ವಜನಿಕರು ಪೊಲೀಸ್‌ ಠಾಣೆಗೆ ದೂರು ನೀಡಬೇಕು’ ಎಂದು ಸಲಹೆ ನೀಡಿದರು.

‘ನಗರಗಳಲ್ಲಿ ಅಸಮರ್ಪಕ ಕಸ ವಿಲೇವಾರಿಯೂ ಮಾನವ ಹಕ್ಕುಗಳ ಉಲ್ಲಂಘನೆಯೇ. ಮೈಸೂರಿನ ಪಾಲಿಕೆ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ಕಸ ವಿಲೇವಾರಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ. ಈ ವಿಷಯದ ಬಗ್ಗೆ ಬೆಂಗಳೂರಿನಿಂದ ಒಂದೇ ಒಂದು ದೂರು ಬಂದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !