ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ವಾದ್ಯದ ಕಲಾವಿದ ಸಿದ್ದಪ್ಪ ಕಂಚು

ಚರ್ಮ ವಾದ್ಯದ ನಾವಲಗಿ ಕಲಾವಿದ ಸಿದ್ದಪ್ಪ ಕಂಚು....
Last Updated 20 ಮೇ 2018, 14:41 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮ ಜಿಲ್ಲೆಯ ಸಾಂಸ್ಕೃತಿಕ ಗ್ರಾಮದ ಖ್ಯಾತಿ ಹೊಂದಿದೆ.  ಗ್ರಾಮದಲ್ಲಿ ಮನೆಗೊಬ್ಬರು ಕಲಾವಿದರಿದ್ದಾರೆ. ಇಂಥವರಲ್ಲಿ ಚರ್ಮ ವಾದ್ಯದ ಕಲಾವಿದ ಸಿದ್ದಪ್ಪ ಸಂಗಪ್ಪ ಕಂಚು ಗಮನ ಸೆಳೆಯುತ್ತಾರೆ.

ಕರಡಿ ವಾದನ, ಕಣಿ ವಾದನ, ದಿಮ್ಮು ವಾದ್ಯ, ತಾಳ ವಾದ್ಯ ಮತ್ತು ತಮಡಿ ವಾದ್ಯದ ಮೂಲಕ ಸಿದ್ದಪ್ಪ ಕಂಚು ಹೆಸರು ಗಳಿಸಿದ್ದಾರೆ.

ಮೂರನೇ ತರಗತಿಯವರೆಗೆ ಮಾತ್ರ ಓದಿರುವ ಅವರು, ವಾದ್ಯ ನುಡಿಸುವುದರಲ್ಲಿ ಅವರನ್ನು ಮೀರಿಸುವವರು ಇಲ್ಲ. 58 ರ ಆಸು ಪಾಸಿನ ಸಿದ್ದಪ್ಪ ತಮ್ಮ ಹನ್ನೆರಡನೆ ವಯಸ್ಸಿನಲ್ಲಿ ವಾದ್ಯ ನುಡಿಸಲು ಕಲಿತವರು.

ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಪರಪ್ಪ ಕಂಪು ಅವರ ಮಾರ್ಗದರ್ಶನದಲ್ಲಿ ವಾದ್ಯ ನುಡಿಸುವುದನ್ನು ಕಲಿತರು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅವರ ನೀಡಿದ ವಾದ್ಯದ ಮೋಡಿಗೆ ತಲೆಗೂಗದವರು ಇಲ್ಲ.

ಬೆಳಗಾವಿ, ಮೂಡಬಿದರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಳಲ್ಲೂ ತಮ್ಮ ಕಲೆಯ ಪ್ರದರ್ಶನ ಮಾಡಿದ್ದಾರೆ. ಧಾರವಾಡ ಅಕಾಶವಾಣಿ ಕೇಂದ್ರ ಇವರ ಕಣಿ ವಾದನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ.

ಮೈಸೂರಿನ ದಸರಾ ಉತ್ಸವದಲ್ಲಿ, ಅಯ್ಯನಗುಡಿ ಉತ್ಸವ, 2004ರಲ್ಲಿ ಉಡುಪಿಯ ಪರ್ಯಾಯ ಉತ್ಸವ, ಗೌರಿಬಿದನೂರಿನಲ್ಲಿ ನಡೆದ ಕುವೆಂಪು ಅವರ ಜನ್ಮ ಶತಮಾನೋತ್ಸವ, 2007ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸ ನಗರದಲ್ಲಿ ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋ ಸಮ್ಮೇಳನ, 2012ರಲ್ಲಿ ಕರ್ನಾಟಕ ಜಾನಪದ ಸಂಗೀತ ಕಲಾ ಪರಿಷತ್ತಿನ ಆಶ್ರಯದಲ್ಲಿ ನಡೆದ 2ನೇ ಅಖಿಲ ಭಾರತ ಕರ್ನಾಟಕ ಜಾನಪದ ಚರ್ಮವಾದ್ಯ ಸಮ್ಮೇಳನ, 2014ರಲ್ಲಿ ಹಂಪಿಯಲ್ಲಿ ನಡೆದ ಹಸ್ತಪ್ರತಿ ಸಮ್ಮೇಳನ, ಬೆಂಗಳೂರಿನಲ್ಲಿ ನಡೆದ ಸುಗ್ಗಿ ಹುಗ್ಗಿ ಕಾರ್ಯಕ್ರಮ, 2006ರಲ್ಲಿ ಚಾಮರಾಜ ನಗರದಲ್ಲಿ ನಡೆದ ಗಡಿನಾಡ ಉತ್ಸವದಲ್ಲಿ, ಕಿತ್ತೂರು ಉತ್ಸವ, ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ನಡೆದ ಕಾರ್ಯಕ್ರಮ–ಹೀಗೆ ಅವರು ಪ್ರದರ್ಶನ ನೀಡಿದ ಪಟ್ಟಿ ಸಾಗುತ್ತದೆ.

ಅಥಣಿಯ ಮೋಟಗಿ ಮಠ, ಹಿಪ್ಪರಗಿಯ ಸಿದ್ಧರಾಮೇಶ್ವರ ಸ್ವಾಮೀಜಿ, ಇಂಚಗೇರಿ ಪ್ರಭುಜಿ, ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, ಹಳಿಂಗಳಿ ಕಮರಿಮಠದ ಶಿವಾನಂದ ಸ್ವಾಮೀಜಿ  ಅವರು ಎದುರು  ವಾದ್ಯ ನುಡಿಸಿ ಅವರುಗಳಿಂದ ಬೇಷ್‌ ಎನಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಸಿದ್ದಪ್ಪ ಅವರು ಕಲಾ ಸೇವೆಯನ್ನು ಇಂದಿಗೂ ಮುಂದುವರೆಸಿದ್ದಾರೆ.

ವಿಶ್ವಜ ಕಾಡದೇವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT