ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ದಿನವೂ ‘ನಾಮಪತ್ರ’ ಸುರಿಮಳೆ

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ 89 ನಾಮಪತ್ರ ಸಲ್ಲಿಕೆ
Last Updated 25 ಏಪ್ರಿಲ್ 2018, 13:11 IST
ಅಕ್ಷರ ಗಾತ್ರ

ವಿಜಯಪುರ: ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಮಂಗಳವಾರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 83 ಅಭ್ಯರ್ಥಿಗಳು, 89 ನಾಮಪತ್ರ ಸಲ್ಲಿಸಿದರು.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ, ಸಿಂದಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಣ್ಣ ಸಾಲಿ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಗರಾಜ ದೇಸಾಯಿ, ಜೆಡಿಎಸ್‌ ಅಭ್ಯರ್ಥಿಯಾಗಿ ಸೋಮನಗೌಡ ಪಾಟೀಲ, ಇಂಡಿ ಕ್ಷೇತ್ರದಿಂದ ರವಿಕಾಂತ ಪಾಟೀಲ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎಸ್‌.ಕೆ.ಬೆಳ್ಳುಬ್ಬಿ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ, ಪಾದಯಾತ್ರೆ ನಡೆಸಿದರು.

ವಿಠ್ಠಲ ಕಟಕದೊಂಡ ವಿಜಯಪುರದ ಜಲನಗರದಲ್ಲಿರುವ ಬುದ್ಧ ವಿಹಾರದಿಂದ ಬೆಂಬಲಿಗರು, ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರೆ, ಎಸ್‌.ಕೆ.ಬೆಳ್ಳುಬ್ಬಿ ಇಬ್ರಾಹಿಂಪುರ ರೈಲ್ವೆ ಗೇಟ್‌ ಬಳಿಯಿರುವ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಿಂದ ಮಿನಿವಿಧಾನಸೌಧದವರೆಗೂ ಪಾದಯಾತ್ರೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ವಿಠ್ಠಲ ಕಟಕದೊಂಡ ಅವರಿಗೆ ನಾಗಠಾಣ ಕ್ಷೇತ್ರದ ಹಾಲಿ ಶಾಸಕ ಪ್ರೊ.ರಾಜು ಆಲಗೂರ ಸಾತ್‌ ನೀಡಿದರೆ, ಎಸ್‌.ಕೆ.ಬೆಳ್ಳುಬ್ಬಿ ಜತೆಯಲ್ಲಿ ಸ್ಥಳೀಯ ಜೆಡಿಎಸ್‌ ಮುಖಂಡರು ಹೆಜ್ಜೆ ಹಾಕಿದರು. ಈಗಾಗಲೇ ಬಿ ಫಾರ್ಮ್‌ ಇಲ್ಲದೇ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರೇಷ್ಮಾ ಪಡೇಕನೂರ ಗೈರು ಹಾಜರಿ ಗೋಚರಿಸಿತು.

83 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಮಂಗಳಾದೇವಿ ಬಿರಾದಾರ (ಜೆಡಿಎಸ್-, 2 ನಾಮಪತ್ರ), ಪ್ರಭುಗೌಡ ಗೌಡರ (ಪಕ್ಷೇತರ), ಸಿದ್ದಪ್ಪ ವಾಲೀಕಾರ (ಪಕ್ಷೇತರ), ವಿ.ಪಿ.ರಕ್ಷಿತ್ (ನಮ್ಮ ಕಾಂಗ್ರೆಸ್), ಬಾಪುಗೌಡ ಪಾಟೀಲ (ಶಿವಸೇನಾ), ಹೊನ್ನಪ್ಪ ರಾಮತೀರ್ಥ (ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ), ನಾಗೂರ ಮೇಟಿ ಶ್ರೀಧರ (ಪಕ್ಷೇತರ), ಎ.ಎಸ್.ಪಾಟೀಲ ನಡಹಳ್ಳಿ (ಬಿಜೆಪಿ), ರಾಮಕೃಷ್ಣ ಲಮಾಣಿ (ಶಿವಸೇನೆ) ನಾಮಪತ್ರ ಸಲ್ಲಿಸಿದ್ದಾರೆ.

ದೇವರಹಿಪ್ಪರಗಿಯಿಂದ ಭೀಮನಗೌಡ ಈರಣ್ಣ ಕೇಶಪ್ಪಗೋಳ (ಎನ್‌ಸಿಪಿ, -2 ನಾಮಪತ್ರ), ಸಿದ್ರಾಮಪ್ಪ ನಾಗಪ್ಪ ಮಠದ (ಪಕ್ಷೇತರ), ಪುಂಡಲೀಕ ರಾಯಪ್ಪ ಹಂದಿಗನೂರ (ಪಕ್ಷೇತರ), ಬಾಪುಗೌಡ ಶಂಕರಗೌಡ ಪಾಟೀಲ (ಕಾಂಗ್ರೆಸ್), ಗುರಲಿಂಗಪ್ಪಗೌಡ ನಾನಾಗೌಡ ಪಾಟೀಲ (ಪಕ್ಷೇತರ), ಬಾಪುಗೌಡ ಮಲ್ಲನಗೌಡ ಪಾಟೀಲ (ಪಕ್ಷೇತರ), ಶ್ರೀಕಾಂತ ಸೋಮಲು ರಾಠೋಡ (ಪಕ್ಷೇತರ), ಭೀಮಪ್ಪ ಚಂದಪ್ಪ ಪಡೇಕನೂರ (ಪಕ್ಷೇತರ), ಕಿರಣ ಸಿದ್ರಾಮಯ್ಯ ಸಾವಳಬಾವಿಮಠ (ಎಂಇಪಿ) ನಾಮಪತ್ರ ಸಲ್ಲಿಸಿದರು.

ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಸಂಗರಾಜ ದೇಸಾಯಿ (ಬಿಜೆಪಿ,- 2 ನಾಮಪತ್ರ), ನಿಂಗಣ್ಣ ಆಲೂರ (ಜನಸಾಮಾನ್ಯರ ಪಕ್ಷ), ಯಲ್ಲಪ್ಪ ಗುಂಡಕರ್ಜಗಿ (ಪಕ್ಷೇತರ), ಮಲ್ಲಿಕಾರ್ಜುನ ಪಾಟೀಲ (ಪಕ್ಷೇತರ), ಸೋಮನಗೌಡ ಬಿ.ಪಾಟೀಲ (ಜೆಡಿಎಸ್), ಭಾಗ್ಯಶ್ರೀ ಶಿವಾನಂದ ಪಾಟೀಲ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಅಡಿವೆಪ್ಪ ಸಾಲಗಲ್ಲ (ಬಿಎಸ್‌ಪಿ), ಸಂಗಯ್ಯ ಹಿರೇಮಠ (ಶಿವಸೇನಾ), ಲಕ್ಷ್ಮೀಬಾಯಿ ಗುದ್ದಿ (ಪಕ್ಷೇತರ), ಸಂಗಯ್ಯ ಮರಿಮಠ (ಪಕ್ಷೇತರ), ಸಂಗಪ್ಪ ಇಂಡಿ (ಪಕ್ಷೇತರ), ಭಪರಮ್ಮ ಜನವಾಡ (ಎಐಎಂಇಪಿ), ಬಸಪ್ಪ ಕಾತ್ರಾಳ (ಕೆಜೆಪಿ), ಸುಭಾಸ ಜಿಡ್ಡಿ (ಪಕ್ಷೇತರ), ದತ್ತಾತ್ರೇಯ ಯಡಗಿ (ಪಕ್ಷೇತರ), ಸುನೀಲ ಕಾಟಕರ (ಪಕ್ಷೇತರ), ರವೀಂದ್ರಗೌಡ ಪಾಟೀಲ (ಪಕ್ಷೇತರ), ಗೌಸಪೀರ ಜಮಾದಾರ (ಪಕ್ಷೇತರ) ನಾಮಪತ್ರ ಸಲ್ಲಿಸಿದರು.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ದೊಂಡಿಬಾ ರಾಠೋಡ (ಪಕ್ಷೇತರ), ಮಹ್ಮದಸಾಜೀದ ಲೋಣಿ (ಎಐಎಂಇಪಿ), ಮಹೇಶ ಜಾಧವ (ಶಿವಸೇನಾ), ಕಲ್ಲಪ್ಪ ಕಡೇಚೂರ (ಪಕ್ಷೇತರ), ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ, -2 ನಾಮಪತ್ರ), ರಾಕೇಶ ತೇಲಿ (ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ), ಎಸ್.ಕೆ.ಬೆಳ್ಳುಬ್ಬಿ (ಜೆಡಿಎಸ್), ಅಬ್ದುಲ್‌ ಹಮೀದ್ ಮುಶ್ರೀಫ್ (ಕಾಂಗ್ರೆಸ್,- 2 ನಾಮಪತ್ರ), ಈರಪ್ಪ ಕುಂಬಾರ (ಪಕ್ಷೇತರ), ಸೈಯ್ಯದ್‌ಗೌಸ್‌ ಇನಾಮದಾರ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ದೇವಾನಂದ ಚವ್ಹಾಣ (ಜೆಡಿಎಸ್), ಮರಗಣ್ಣ ಹುನ್ನೂರ (ಶಿವಸೇನಾ) ವಿಠ್ಠಲ ಕಟಕದೊಂಡ (ಕಾಂಗ್ರೆಸ್), ಕೃಷ್ಣಾ ಚವ್ಹಾಣ (ಎಂಇಪಿ), ಸಂಜೀವ ಮಾನೆ (ನಮ್ಮ ಕಾಂಗ್ರೆಸ್), ಚಿದಾನಂದ ಚಲವಾದಿ (ಪಕ್ಷೇತರ), ರುದ್ರಪ್ಪ ಚಲವಾದಿ (ಭಾರತೀಯ ಪಬ್ಲಿಕನ್ ಪಾರ್ಟಿ), ಸಾಗರ ಇರಸೂರ (ಭಾರತೀಯ ಜನಶಕ್ತಿ ಕಾಂಗ್ರೆಸ್), ಶಾರದಾಬಾಯಿ ಲಮಾಣಿ (ಪಕ್ಷೇತರ), ತುಳಸಪ್ಪ ದಾಸರ (ಪಕ್ಷೇತರ), ದಾದಾಸಾಹೇಬ ಬಾಗಾಯತ್ (ಪಕ್ಷೇತರ), ಸೂರ್ಯಕಾಂತ ಕಾಂಬಳೆ (ಪ್ರಜಾ ಪರಿವರ್ತನಾ ಪಕ್ಷ) ನಾಮಪತ್ರ ಸಲ್ಲಿಸಿದರು.

ಇಂಡಿ ವಿಧಾನಸಭಾ ಕ್ಷೇತ್ರದಿಂದ ಲಕ್ಷ್ಮೀಬಾಯಿ ತಡ್ಲಗಿ (ಎಐಎಂಇಪಿ), ಬಸವರಾಜ ಪಾಟೀಲ ಉರುಫ್‌ ಗೌಡರ (ಜೆಡಿಎಸ್), ಡಿ.ಜಿ.ಕಟಕದೊಂಡ ಉರುಫ್‌ ವೆಂಕಟೇಶ್ವರ ಮಹಾ ಸ್ವಾಮೀಜಿ (ಹಿಂದೂಸ್ತಾನ ಜನತಾ ಪಾರ್ಟಿ), ಚಂದ್ರಶೇಖರ ಹೊಸಮನಿ (ಪಕ್ಷೇತರ), ದಯಾಸಾಗರ ಪಾಟೀಲ (ಬಿಜೆಪಿ), ಪ್ರದೀಪ ಮೂರಮಾನ (ಪಕ್ಷೇತರ), ಅಬುಜರ ತಾಮಟಗೇರ (ಪಕ್ಷೇತರ), ರವಿಕಾಂತ ಪಾಟೀಲ (ಪಕ್ಷೇತರ), ವಿರಾಜ ಪಾಟೀಲ (ಪಕ್ಷೇತರ), ಚನ್ನಪ್ಪ ಭೋಸಗಿ (ಪಕ್ಷೇತರ), ಸದಾಶಿವ ಬಿರಾದಾರ (ಪಕ್ಷೇತರ), ಬಾಪುರಾಯ ಕಟಾಯಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಮಲಕಪ್ಪ ಸಿದ್ಧಪ್ಪ ಜೇರಟಗಿ (ಪಕ್ಷೇತರ), ನಾಗೇಶ ಉರುಫ್‌ ನಾಗು ರಾಠೋಡ (ಪಕ್ಷೇತರ), ಶಂಶೋದ್ಧೀನ್‌ ಮುಲ್ಲಾ (ಎನ್‌ಸಿಪಿ), ಮಲ್ಲೇಶಪ್ಪ ಪೂಜಾರಿ (ಪಕ್ಷೇತರ), ಯಶವಂತಗೌಡ ರೂಗಿ (ಪಕ್ಷೇತರ), ಗುಲಶನಬಿ ನದಾಫ್ (ಎಂಇಪಿ) ಸಿದ್ದನಗೌಡ ಪಾಟೀಲ (ಪಕ್ಷೇತರ), ನಿಂಗೊಂಡಪ್ಪ ಅಥನೂರ (ಪಕ್ಷೇತರ), ಮಲ್ಲಣ್ಣ ನಿಂಗಪ್ಪ ಸಾಲಿ (ಕಾಂಗ್ರೆಸ್), ಲಿಯಾಕತಲಿ ದರ್ಗಾ (ಪ್ರಜಾ ಪರಿವರ್ತನಾ ಪಕ್ಷ), ಮಲ್ಲಪ್ಪ ಚನ್ನವೀರಪ್ಪ ಮನಗೂಳಿ (ಜೆಡಿಎಸ್, 2 ನಾಮಪತ್ರ), ದಾನಪ್ಪಗೌಡ ಚನಗೊಂಡ (ಪಕ್ಷೇತರ), ಮೊಹ್ಮದ ಸಾದಿಕ ಫರೀದಸಾಬ್ ಸುಂಬಡ (ಪಕ್ಷೇತರ) ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT