ಶುಕ್ರವಾರ, ಸೆಪ್ಟೆಂಬರ್ 17, 2021
29 °C

ರಫೇಲ್ ಯುದ್ಧ ವಿಮಾನ ಖರೀದಿ: 70 ಸಾವಿರ ಕೋಟಿ ಹಗರಣ ಗುಂಡೂರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 70 ಸಾವಿರ ಕೋಟಿ ಹಗರಣವಾಗಿದೆ ಎಂದು ಕೆ‍ಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ದೂರಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದೊಂದು ವಿಮಾನಕ್ಕೆ ₹550 ಕೋಟಿ ನಿಗದಿ ಮಾಡಿತ್ತು. ಆದರೆ ನರೇಂದ್ರ ಮೋದಿ ಅವರು ಆ ಬೆಲೆಯನ್ನು ₹1,650 ಕೋಟಿಗೆ ಹೆಚ್ಚಿಸಿದ್ದಾರೆ. ಈ ಒಪ್ಪಂದಕ್ಕೆ ಸಹಿ ಮಾಡಲು ಪ್ರಧಾನಿ ಫ್ರಾನ್ಸ್‌ಗೆ ಹೋಗಿದ್ದಾಗ, ಅವರ ಜೊತೆಯಲ್ಲಿ ರಕ್ಷಣಾ ಸಚಿವ, ವಿದೇಶಾಂಗ ಸಚಿವರು ಇರಲಿಲ್ಲ, ಉದ್ಯಮಿ ಅನಿಲ್ ಅಂಬಾನಿ ಇದ್ದರು ಎಂದು ಹೇಳಿದರು.

ರಫೇಲ್ ಗುತ್ತಿಗೆ ಪಡೆಯುವ ಕೇವಲ 10 ದಿನಗಳ ಹಿಂದಷ್ಟೇ ಅನಿಲ್ ಅಂಬಾನಿಯವರ ಕಂಪೆನಿ ಆರಂಭವಾಗಿತ್ತು. ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದ, ಆ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಮೊದಲು ಎಚ್‌ಎಎಲ್‌ಗೆ ನೀಡಲು ತೀರ್ಮಾನಿಸಲಾಗಿತ್ತು. ಈ ವಿಷಯವನ್ನು ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಶ್ನಿಸಿದರೆ ಮೋದಿ ಅವರು ಉತ್ತರ ನೀಡಲಿಲ್ಲ. ಕೇವಲ ₹65 ಕೋಟಿ ಮೊತ್ತದ ಬೋಫೋರ್ಸ್ ಹಗರಣ ನಡೆದಾಗ ಬಿಜೆಪಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಿತ್ತು. ಈ ಅದೇ ಪಕ್ಷ ಹಗರಣದಲ್ಲಿ ಸಿಲುಕಿದೆ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು