ಚಂಡಮಾರುತ: ಬೋಟ್‌ಗಳು ವಾಪಸ್

7

ಚಂಡಮಾರುತ: ಬೋಟ್‌ಗಳು ವಾಪಸ್

Published:
Updated:

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಪ್ರಭಾವದಿಂದ ಕರಾವಳಿಯಲ್ಲಿ ಹವಾಮಾನ ವೈಪರೀತ್ಯವಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಶುಕ್ರವಾರವೂ ಬಿರುಸಿನ ಮಳೆಯಾಯಿತು.

ಬೆಳಿಗ್ಗೆ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ಯ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಸಂಜೆ ವೇಳೆಗೆ ಜೋರಾಗಿ ಮಳೆ ಸುರಿಯಿತು. ಗುಡುಗು ಸಿಡಿಲಿನ ಅಬ್ಬರವೂ ಇತ್ತು. ಸುಮಾರು 2 ಗಂಟೆ ಮಳೆ ಸುರಿಯಿತು. ಕಡಲಿಗೆ ಇಳಿದಿದ್ದ ನೂರಾರು ಬೋಟುಗಳು ಮಲ್ಪೆಗೆ ಮರಳಿದ್ದು, ಇನ್ನೂ ನೂರಾರು ಬೋಟುಗಳು ಬರುವುದಕ್ಕೆ ಬಾಕಿ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ, ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಮಳೆಯಾಗಿದೆ.

ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಮಡಿಕೇರಿ, ಸುಂಟಿಕೊಪ್ಪ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಅರ್ಧ ಗಂಟೆ ಮಳೆ ಆರ್ಭಟಿಸಿತು.ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಬಿ.ಶೆಟ್ಟಿಗೇರಿ ಭಾಗದಲ್ಲಿ ಮಳೆ ಬಿರುಸು ಪಡೆಯಿತು.

ಸಿಡಿಲು ಬಡಿದು ಸಾವು: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮದ ಬಳಿ ಶುಕ್ರವಾರ ಊರಬೇಡರ ಮಲ್ಲಯ್ಯ (65) ಸಿಡಿಲು ಬಡಿದು ಮೃತ ಪಟ್ಟಿದ್ದಾರೆ. ದನಗಳನ್ನು ಮೇಯಿಸಲು ಹೋಗಿದ್ದಾಗ ಅವರಿಗೆ ಸಿಡಿಲು ಬಡಿದಿದೆ.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !