ರಮ್ಯಾ ಎಚ್ಚರ ವಹಿಸಬೇಕಿತ್ತು: ಅಂಬರೀಷ್‌

7

ರಮ್ಯಾ ಎಚ್ಚರ ವಹಿಸಬೇಕಿತ್ತು: ಅಂಬರೀಷ್‌

Published:
Updated:

ಮಂಡ್ಯ: ‘ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಎಚ್ಚರ ವಹಿಸಿ ಟ್ವೀಟ್‌ ಮಾಡಬೇಕಿತ್ತು’ ಎಂದು ಕಾಂಗ್ರೆಸ್‌ ಮುಖಂಡ ಅಂಬರೀಷ್‌ ಇಲ್ಲಿ ಶುಕ್ರವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿ, ‘ಯಾರ ಬಗ್ಗೆ ಏನೇ ಆರೋಪ ಮಾಡಿದರೂ ಯೋಚಿಸಿ ಮಾಡಬೇಕು. ರಮ್ಯಾ ಅವರು ನೋಡಿಕೊಂಡು ಟ್ವಿಟರ್‌ನಲ್ಲಿ ಬರೆಯಬೇಕಾಗಿತ್ತು. ಜವಾಬ್ದಾರಿ ಸ್ಥಾನದಲ್ಲಿದ್ದು, ಮುಂಬರುವ ಪರಿಣಾಮಗಳ ಬಗ್ಗೆ ಚಿಂತನೆ ಮಾಡಬೇಕಾಗಿತ್ತು’ ಎಂದರು.

ನಟ ದುನಿಯಾ ವಿಜಯ್‌ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ‘ನ್ಯಾಯಾಧೀಶರೇ ಹೇಳಿರುವಂತೆ ನಾವು ರೋಲ್‌ ಮಾಡೆಲ್‌ ಆಗಿರಬೇಕು. ನಮ್ಮ ಮಾತಿಗೆ ಸಮಾಜದಲ್ಲಿ ಗೌರವ ಇದೆ. ಹೀಗಾಗಿ ನಾವು ಬುದ್ಧಿ ಹೇಳುತ್ತೇವೆ. ಅದನ್ನು ಉಳಿಸಿಕೊಂಡು ನಡೆಯಬೇಕು. ಹಿರಿಯರನ್ನು ನೋಡಿಕೊಂಡು ಪಾಠ ಕಲಿಯಬೇಕು. ಜೀವನದಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆಯುತ್ತವೆ, ಅವು ಸಾಮಾನ್ಯ’ ಎಂದರು.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !