ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ನೀರಿನ ಬಳಕೆಯ ಜಾಗೃತಿ ಸಂದೇಶ

Last Updated 2 ಜೂನ್ 2019, 19:49 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ದೊಡ್ಡ ಮಸೀದಿಯಾದ ನಗರದ ಜಾಮೀಯಾ ಮಸೀದಿ ಸೇರಿದಂತೆ ನಗರದ ಎಲ್ಲ ಮಸೀದಿಗಳಲ್ಲಿ ಈ ಬಾರಿಯ ರಂಜಾನ್‌ ಶುಕ್ರವಾರದ ಪ್ರಾರ್ಥನೆ ವೇಳೆ ನೀರಿನ ಮಿತ ಬಳಕೆ ಬಗ್ಗೆ ಧರ್ಮಗುರುಗಳು ಜಾಗೃತಿ ಸಂದೇಶ ಸಾರುತ್ತಿದ್ದಾರೆ.

ನೀರಿನ ಮಿತ ಬಳಕೆ, ರಕ್ಷಣೆ, ಮಹತ್ವದ ಬಗ್ಗೆ ಪ್ರಾರ್ಥನೆ ವೇಳೆ ಸಮುದಾಯದ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

‘ಇಪ್ಪತ್ತು ವರ್ಷಗಳ ನಂತರ ರಂಜಾನ್ ಬೇಸಿಗೆಯಲ್ಲಿ ಬಂದಿದೆ. ಎಲ್ಲೆಡೆ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ, ನಮ್ಮ ಧರ್ಮಗುರುಗಳು ಪ್ರಾರ್ಥನೆ ವೇಳೆ ನೀರಿನ ಮಿತ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇದು ಒಂದು ರೀತಿ ವಿಶೇಷ ಸಂದೇಶವಾಗಿದೆ’ ಎಂದು ಜಾಮೀಯಾ ಮಸೀದಿಯ ಕಾರ್ಯದರ್ಶಿ ಅಯಾಜ್ ಅಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹವಾನಿಯಂತ್ರಕಗಳನ್ನು ಅಳವಡಿಸಲಾಗಿದೆ. ಇದರಿಂದ ಒಂದಿಷ್ಟು ತಂಪು ವಾತಾವರಣ ಇರಲಿದೆ’ ಎಂದು ಹೇಳಿದರು.

‘ನೀರಿನ ಸಮಸ್ಯೆ ನಮ್ಮ ಮನೆ, ಊರು, ನಮ್ಮ ರಾಜ್ಯ, ದೇಶದ ಸಮಸ್ಯೆ ಅಷ್ಟೇ ಅಲ್ಲ. ಜಾಗತಿಕ ಸಮಸ್ಯೆಯಾಗಿದೆ. ನೀರನ್ನು ಇತಿಮಿತಿಯಲ್ಲಿ ಬಳಕೆ ಮಾಡಬೇಕು. ನೀರನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬ ಕಡೆಗೆ ಗಮನ ಕೊಡಬೇಕು. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಆಹಾರ ಬಳಕೆ ಮಾಡಬೇಕು’ ಎಂದು ಧರ್ಮಗುರುಗಳು ಸಂದೇಶ ಸಾರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT